ದಾಂಡೇಲಿ: ದಾಂಡೇಲಿ ಪ್ರೀಮಿಯರ್ ಲೀಗ್ ಸಮಿತಿಯ ಆಶ್ರಯದಡಿ ಇದೇ ಬರುವ ಫೆಬ್ರವರಿ 9 ರಿಂದ ಫೆ:11ರವರೆಗೆ ನಡೆಯಲಿರುವ ದಾಂಡೇಲಿ ಪ್ರೀಮಿಯರ್ ಲೀಗ್ ಸೀಸನ್: 3 ಹೊನಲು ಬೆಳಕಿನ ಪಂದ್ಯಾವಳಿಗೆ ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯು ರೂ.50 ಸಾವಿರ ಹಣವನ್ನು ಕೊಡುಗೆಯಾಗಿ ನೀಡಿದೆ.
ನಗರದ ಸಂತೋಷ್ ಹೋಟೆಲ್ ಸಭಾಭವನದಲ್ಲಿ ಮಂಗಳವಾರ ವೆಸ್ಟ್ ಕೋಸ್ಟ್ ಆಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ್ ತಿವಾರಿಯವರು ರೂ:50 ಸಾವಿರ ಮೊತ್ತದ ಚೆಕ್’ನ್ನು ದಾಂಡೇಲಿ ಪ್ರೀಮಿಯರ್ ಲೀಗ್ ಸಮಿತಿಯ ಅಧ್ಯಕ್ಷರಾದ ವಿಷ್ಣುಮೂರ್ತಿ ರಾವ್ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜೇಶ್ ತಿವಾರಿಯವರು ದಾಂಡೇಲಿ ಪ್ರೀಮಿಯರ್ ಲೀಗ್ ಅತ್ಯಂತ ವೈಶಿಷ್ಟ್ಯ ಪೂರ್ಣವಾಗಿ ಈ ಪಂದ್ಯಾವಳಿಯನ್ನು ಆಯೋಜಿಸುತ್ತಿದೆ. ಈ ಪಂದ್ಯಾವಳಿಯ ಯಶಸ್ಸಿಗಾಗಿ ಕಾಗದ ಕಾರ್ಖಾನೆ ರೂ: 50 ನಗದು ಮೊತ್ತವನ್ನು ನೀಡುತ್ತಿದೆ. ಪಂದ್ಯಾವಳಿ ಯಶಸ್ವಿಯಾಗಿ ನಡೆಯಲೆಂದು ಶುಭವನ್ನು ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಾಂಡೇಲಿ ಪ್ರೀಮಿಯರ್ ಲೀಗ್ ಸಮಿತಿಯ ಅಧ್ಯಕ್ಷರಾದ ವಿಷ್ಣುಮೂರ್ತಿ ರಾವ್ ಹಾಗೂ ವಕ್ತಾರ ಇಮಾಮ್ ಸರ್ವರ್ ಅವರು ಈ ಪಂದ್ಯಾವಳಿಯ ಯಶಸ್ಸಿಗೆ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆ ತುಂಬು ಹೃದಯದ ಸಹಕಾರವನ್ನು ನೀಡಿರುವುದು ಸಂತಸ ತಂದಿದೆ. ಅದೇ ರೀತಿಯಲ್ಲಿ ದಾನಿಗಳು, ಕ್ರೀಡಾಭಿಮಾನಿಗಳು ಪಂದ್ಯಾವಳಿಯ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಪಂದ್ಯಾವಳಿಯನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಭಾಗವಹಿಸುವಂತೆ ಮನವಿಯನ್ನು ಮಾಡಿದರು.
ಈ ಸಂದರ್ಭದಲ್ಲಿ ದಾಂಡೇಲಿ ಪ್ರೀಮಿಯರ್ ಲೀಗ್ ಚೇರ್ಮನ್ ಕುಲದೀಪ್ ಸಿಂಗ್ ರಜಪೂತ್, ಸಮಿತಿಯ ಪ್ರಮುಖರುಗಳಾದ ಪ್ರಮೋದ್ ಕದಂ, ಶಮಲ್ ಅಬ್ದುಲ್ಲ, ಅತುಲ್ ಮಾಡ್ದೋಳ್ಕರ್, ಸಂದೀಪ್ ರಜಪೂತ್ ಮೊದಲಾದವರು ಉಪಸ್ಥಿತರಿದ್ದರು.