Slide
Slide
Slide
previous arrow
next arrow

ದಾಂಡೇಲಿ ಪ್ರೀಮಿಯರ್ ಲೀಗ್ ತಯಾರಿ ಆರಂಭ

300x250 AD

ದಾಂಡೇಲಿ : ಫೆಬ್ರುವರಿ 9 ರಿಂದ 11ರವರೆಗೆ ದಾಂಡೇಲಿ ನಗರದ ಡಿಎಫ್ಎ ಮೈದಾನದಲ್ಲಿ ನಡೆಯಲಿರುವ ದಾಂಡೇಲಿ ಪ್ರೀಮಿಯರ್ ಲೀಗ್ ಸೀಸನ್ 3 ಕ್ರಿಕೆಟ್ ಪಂದ್ಯಾವಳಿಯು ಈ ಬಾರಿ ಹೊನಲು ಬೆಳಕಿನಲ್ಲಿ ನಡೆಯಲಿರುವುದರಿಂದ ಪಂದ್ಯಾವಳಿಗೆ ಬೇಕಾದ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳುವ ನಿಟ್ಟಿನಲ್ಲಿ ಗೋವಾ ರಾಜ್ಯದ ಮಡಗಾವ್‌ನಲ್ಲಿ ನಡೆಯುತ್ತಿರುವ ಸೌತ್ ಗೋವಾ ಪ್ರೀಮಿಯರ್ ಲೀಗ್ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯ ವ್ಯವಸ್ಥೆಯನ್ನು ವೀಕ್ಷಿಸಲು ದಾಂಡೇಲಿ ಪ್ರೀಮಿಯರ್ ಲೀಗಿನ ಅಧ್ಯಕ್ಷರಾದ ವಿಷ್ಣುಮೂರ್ತಿ ರಾವ್ ಅಲ್ಲಿಗೆ ಭೇಟಿ ನೀಡಿ ಅಲ್ಲಿಯ ವ್ಯವಸ್ಥೆಯ ಬಗ್ಗೆ ತಿಳಿದುಕೊಂಡರು.

ಹೊನಲು ಬೆಳಕಿನ ಪಂದ್ಯಾವಳಿಗೆ ಬೇಕಾದ ಲೈಟಿಂಗ್ ವ್ಯವಸ್ಥೆಯ ಬಗ್ಗೆ ಎಲ್ಲ ಮಾಹಿತಿಯನ್ನು ಅಲ್ಲಿಯ ಲೈಟಿಂಗ್ಸ್ ತಂತ್ರಜ್ಞರಿಂದ ಪಡೆದುಕೊಂಡರು. ಈ ಸಂದರ್ಭದಲ್ಲಿ ದಾಂಡೇಲಿಯ ಖ್ಯಾತ ಕ್ರಿಕೆಟಿಗ ಬಾಬು ದೊಡ್ಮನಿ, ಯುವ ಮುಖಂಡ ಪ್ರವೀಣ್ ನಾಯಕ ಹಾಗೂ ಮೊದಲಾದವರು ಉಪಸ್ಥಿತರಿದ್ದರು.

300x250 AD

Share This
300x250 AD
300x250 AD
300x250 AD
Back to top