Slide
Slide
Slide
previous arrow
next arrow

ಮಂಗನ ಖಾಯಿಲೆ ಕುರಿತು ಶಾಸಕ ಭೀಮಣ್ಣ ನಿರ್ಲಕ್ಷ್ಯ: ಮಾರುತಿ ನಾಯ್ಕ್ ಆಕ್ಷೇಪ

300x250 AD

ಸಿದ್ದಾಪುರ: ತಾಲೂಕಿನಲ್ಲಿ ಮಂಗನ ಕಾಯಿಲೆಯು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು ಈ ಕುರಿತು ಕಾಳಜಿವಹಿಸಬೇಕಾಗಿದ್ದ ಶಾಸಕ ಭೀಮಣ್ಣ ನಾಯ್ಕ ಅವರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಮಾರುತಿ ಟಿ.ನಾಯ್ಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಈಗಾಗಲೇ ೩೭ಜನ ಕಾಯಿಲೆಯಿಂದ ಬಳಲುತ್ತಿದ್ದಾರೆ.ಜಿಡ್ಡಿ, ಮಂಡಗಳಲೆ, ಹೆಗ್ಗೆಕೊಪ್ಪ, ನಿಪ್ಲಿ ಭಾಗಗಳಲ್ಲಿ ಮಂಗನ ಕಾಯಿಲೆಯು ವ್ಯಾಪಕವಾಗಿ ಹರಡುತ್ತಿದ್ದು, ಸಿದ್ದಾಪುರ ಪಟ್ಟಣ ಭಾಗದಲ್ಲೂ 2 ಜನ ಸೋಂಕಿತರಿದ್ದಾರೆಂದು ಆರೋಗ್ಯ ಇಲಾಖೆ ಮಾಹಿತಿ ನೀಡುತ್ತಿದೆ. ಕೇವಲ 4 ವರ್ಷದ ಮಗುವಿಗೂ ಕೆಎಫ್‌ಡಿ ಸೋಂಕು ತಗುಲಿದ್ದು ಭೀತಿಯ ವಾತಾವರಣ ಸೃಷ್ಟಿಗೊಳ್ಳುತ್ತಿದೆ.ಆರೋಗ್ಯ ಇಲಾಖೆ ಅಧಿಕಾರಿಗಳು ಸಾರ್ವಜನಿಕರು ಕಾಡನ್ನು ಪ್ರವೇಶಿಸುವಾಗ ಮುನ್ನೆಚ್ಚರಿಕೆ ಕೈಗೊಳ್ಳಿ ಎನ್ನುತ್ತಿದ್ದಾರೆ. ಆದರೆ ಮಂಗಗಳ ಓಡಾಟ ಕೇವಲ ಕಾಡಿಗೆ ಸೀಮಿತವಾಗಿಲ್ಲ. ಪಟ್ಟಣದಲ್ಲಿ, ಜನವಸತಿ ಇರುವಲ್ಲಿಯೂ ಇದೆ.
ತಾಲೂಕಿನಲ್ಲಿ ಈ ಹಿಂದೆ ಮಂಗನ ಕಾಯಿಲೆ ಕಾಣಿಸಿಕೊಂಡಾಗ ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮುಂಜಾಗೃತೆಯಾಗಿ ಮಂಗನ ಕಾಯಿಲೆ ಇರುವ ಭಾಗದ ಜನರಿಗೆ ಲಸಿಕೆ ವ್ಯವಸ್ಥೆ, ಸಾರ್ವಜನಿಕರಿಗೆ ಮಾಹಿತಿ ಮತ್ತು ಜಾಗೃತಿ ನೀಡುತ್ತಾ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ವಹಿಸುತ್ತಿದ್ದರು. ಆಸ್ಪತ್ರೆಗಳಲ್ಲಿ ಸೋಂಕಿತರಾದವರ ಕುರಿತು ಮಾಹಿತಿ ಪಡೆಯುತ್ತಾ, ಮಂಗನ ಕಾಯಿಲೆಯ ಸಮಸ್ಯೆಯ ಗಂಭೀರತೆಯನ್ನು ಆರೋಗ್ಯ ಸಚಿವರ, ಸರ್ಕಾರದ ಗಮನಕ್ಕೆ ತಂದು ಮಣಿಪಾಲ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್, ತಾಲೂಕು ಆಸ್ಪತ್ರೆಯಲ್ಲಿ ವೆಂಟಿಲೇಟರ್ ವ್ಯವಸ್ಥೆಯುಳ್ಳ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಿಸಿದ್ದರು.ಕಾಯಿಲೆಯಿಂದ ಮರಣ ಹೊಂದಿದ ವ್ಯಕ್ತಿಗಳ ಕುಟುಂಬದ ಸದಸ್ಯರಿಗೆ ೨ಲಕ್ಷ ರೂ ಪರಿಹಾರ ಸಿಗುವಂತೆ ವ್ಯವಸ್ಥೆ ಮಾಡಿಸಿದ್ದರು. ಈ ಕುರಿತು ಆರೋಗ್ಯ ಸಚಿವರು, ಕ್ಷೇತ್ರದ ಶಾಸಕರು ತಮ್ಮ ಜವಾಬ್ದಾರಿ ಮರೆತು ಸಿದ್ದಾಪುರ ತಾಲೂಕನ್ನು ನಿರ್ಲಕ್ಷಿಸುತ್ತಿದ್ದಾರೆ.ಶಾಸಕರು ಈ ಕುರಿತು ಗಮನ ಹರಿಸದಿದ್ದರೆ ನಾವು ಪಕ್ಷದ ವತಿಯಿಂದ ತಾಲೂಕು ಆಸ್ಪತ್ರೆ ಎದುರು ಪ್ರತಿಭಟನೆ ಮಾಡುತ್ತೇವೆ ಎಂದು ಮಾರುತಿ ಟಿ.ನಾಯ್ಕ ಹೊಸೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top