Slide
Slide
Slide
previous arrow
next arrow

ದೇಹದಾರ್ಢ್ಯ ಸ್ಪರ್ಧೆ: ರಕ್ಷಿತ್ ಕೋಟ್ಯಾನ್‌ಗೆ ‘ಮಿಸ್ಟರ್ ದಾಂಡೇಲಿ 2024’ ಪಟ್ಟ

300x250 AD

ದಾಂಡೇಲಿ: ಇಲ್ಲಿನ ಹಳೆ ನಗರಸಭೆ ಮೈದಾನದಲ್ಲಿ ದಾಂಡೇಲಿ ಫಿಟ್ನೆಸ್ ಲ್ಯಾಬ್ ವತಿಯಿಂದ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯು ಯಶಸ್ವಿಯಾಗಿ ಸಂಪನ್ನಗೊಂಡಿತು.

ರಾಜ್ಯದ ವಿವಿಧೆಡೆಗಳಿಂದ ಒಟ್ಟು 150 ಕ್ಕೂ ಅಧಿಕ ದೇಹದಾರ್ಢ್ಯ ಪಟುಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ‘ಮಿಸ್ಟರ್ ದಾಂಡೇಲಿ 2024’ ಕಿರೀಟವನ್ನು ಉಡುಪಿಯ ದೇಹದಾರ್ಢ್ಯಪಟು ರಕ್ಷಿತ್ ಕೋಟ್ಯಾನ್ ಅವರು ಮುಡಿಗೇರಿಸಿಕೊಂಡು, 31 ಸಾವಿರ ನಗದು ಹಣ ಮತ್ತು ಆಕರ್ಷಕ ಟ್ರೋಫಿ ಪಡೆದುಕೊಂಡು ಸಂಭ್ರಮಿಸಿದರು.

ದ್ವಿತೀಯ ಸ್ಥಾನವನ್ನು ಉಡುಪಿಯ ಧೀರಜ್ ಕುಮಾರ್ ಅವರು ತನ್ನದಾಗಸಿಕೊಂಡು ರೂ. 20 ಸಾವಿರ ನಗದು, ಟ್ರೋಫಿ ಮತ್ತು ಪ್ರಶಸ್ತಿ ಪತ್ರ ಪಡೆದುಕೊಂಡರು. ತೃತೀಯ ಸ್ಥಾನದೊಂದಿಗೆ ನಗದು ರೂ. 10 ಸಾವಿರ ಮತ್ತು ಶಾಶ್ವತ ಫಲಕವನ್ನು ಉಡುಪಿಯ ಚರಣ್ ರಾಜ್ ಅವರು ಹಾಗೂ ಬೆಸ್ಟ್ ಪೋಸರ್ ಆಗಿ ಹೊರಹೊಮ್ಮಿದ ಬೆಳಗಾವಿಯ ವಿನೋದ ಮೇತ್ರಿ ರೂ.5 ಸಾವಿರ ನಗದು ಪಡೆದುಕೊಂಡರು. ಸಂಭ್ರಮಿಸಿದರು.

300x250 AD

ಸ್ಪರ್ಧೆಯ ಸಂಘಟಕರು ಹಾಗೂ ಫಿಟ್ನೆಸ್ ಲ್ಯಾಬ್ ಮುಖ್ಯಸ್ಥರಾದ ರಹೀಂ ಖಾನ್ ಮತ್ತು ಯೂಸುಫ್ ಶೇಖ ಅವರು ಪಂದ್ಯಾವಳಿಯ ಯಶಸ್ಸಿಗೆ ಸಹಕರಿಸಿದ ಸರ್ವರಿಗೆ ಕೃತಜ್ಞತೆ ಸಲ್ಲಿಸಿದರು.

Share This
300x250 AD
300x250 AD
300x250 AD
Back to top