ಜೊಯಿಡಾ: ಸಿದ್ದಾಪುರದಲ್ಲಿ ಮಂಗನ ಕಾಯಿಲೆ ಬಿರುಸು ಪಡೆದುಕೊಳ್ಳುತ್ತಿದ್ದಂತೆ ಜೊಯಿಡಾದ ಜನರು ಆತಂಕ ವ್ಯಕ್ತಪಡಿಸುತ್ತಾ ತಾಲೂಕಿನಲ್ಲಿ ಮಂಗನ ಕಾಯಿಲೆ ಬರದಿರಲೆಂದು ಸಾರ್ವಜನಿಕರು ಆಶಿಸಿದ್ದಾರೆ.
ಕಳೆದ ಕೆಲವು ವರ್ಷಗಳ ಹಿಂದೆ ತಾಲೂಕಿನಲ್ಲಿ ಮಂಗನ ಕಾಯಿಲೆಯಿಂದ ನಾಲ್ವರು ಪ್ರಾಣ ಬಿಟ್ಟಿದ್ದರು. ಅನೇಕ ಕುಟುಂಬಗಳು ಕಾಯಿಲೆಯಿಂದ ತತ್ತರಿಸಿ ಹೋಗಿದ್ದರು. ಹಿಂದಿನ ಘಟನೆಯನ್ನು ನೆನಪು ಮಾಡಿಕೊಳ್ಳುವ ಜನರು ಮಂಗನ ಕಾಯಿಲೆ ಎಂದರೆ ಈಗಲೂ ಬೆವರುತ್ತಾರೆ. ಅತಿಯಾದ ಬಿಸಿಲಿನಿಂದ , ಉಣ್ಣೆಗಳ ಸಂಪರ್ಕದಲ್ಲಿ ಈ ಕಾಯಿಲೆ ಮೊದಲು ಮಂಗಗಳಲ್ಲಿ ಕಾಣಿಸಿಕೊಳ್ಳುತ್ತದೆ. ಮಂಗಗಳಿಗೆ ಅಂಟಿದ ಉಣ್ಣೆಗಳು ಬಿದ್ದು ಮನುಷ್ಯರಿಗೆ ಕಡಿದಾಗ ಮನುಷ್ಯರಲ್ಲೂ ಈ ಕಾಯಿಲೆ ಹಬ್ಬುತ್ತದೆ. ಆರೋಗ್ಯ ಇಲಾಖೆ ಈ ಕುರಿತು ಅಗತ್ಯ ಕ್ರಮ ಕೈ ಕೊಳ್ಳಬೇಕಾಗಿದೆ.
ತಾಲೂಕಿನಲ್ಲಿ ಮಂಗನ ಕಾಯಿಲೆಯ ಆತಂಕ ಸದ್ಯಕ್ಕಿಲ್ಲ. ಮುಂಜಾಗೃತಾ ಕ್ರಮವನ್ನು ಕೈಗೊಂಡಿರುತ್ತೆವೆ. ಆತಂಕದ ಅಗತ್ಯವಿಲ್ಲ.–ಡಾ. ಸುಜಾತಾ ಉಕ್ಕಲಿ – ತಾಲೂಕಾ ಆರೋಗ್ಯಾಧಿಕಾರಿ