ಸಿದ್ದಾಪುರ: ತಾಲೂಕಿನ ಕಲಗದ್ದೆಯ ನಾಟ್ಯ ವಿನಾಯಕ ದೇವರ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಸಂಭ್ರಮ ಯಶಸ್ವಿಯಾಗಿ ನಡೆಯಿತು. ವಾರ್ಷಿಕೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜೊತೆ ಸಹಸ್ರ ಮೋದಕ ಹವನ, ಸಾಮೂಹಿಕ ಗಣ ಹವನ, ರಥೋತ್ಸವ ನಡೆದವು.
ಸಂಜೆ ನಡೆದ ಸಾಂಸ್ಕೃತಿಕ ಸಂಭ್ರಮದಲ್ಲಿ ನಂದಗೋಕುಲ ಕಲಾ ತಂಡದ ಕಲಾವಿದರಾದ ಶ್ವೇತಾ ಅರೆಹೊಳೆ, ಪೃಥ್ವಿ ಎಸ್. ರಾವ್, ಪೃಶ್ವಿನಿ ಆಚಾರ್ಯ, ಕೃತಿ ಪದ್ಮನಾಭ್ ವೈವಿಧ್ಯಮಯ ನಾಟ್ಯ ಸೇವೆ ನೀಡಿದರು. ಬಳಿಕ ‘ಭೀಷ್ಮ ಪರ್ವ’ ಯಕ್ಷಗಾನ ನಡೆಯಿತು. ಕೊಳಗಿ ಕೇಶವ ಹೆಗಡೆ, ಮಂಜುನಾಥ ಗುಡ್ಡೆದಿಂಬ, ಭಾರ್ಗವ ಹೆಗ್ಗೋಡು ಹಿಮ್ಮೇಳ ಸಹಕಾರ ನೀಡಿದರೆ, ಮುಮ್ಮೇಳದಲ್ಲಿ ವಿನಾಯಕ ಹೆಗಡೆ ಕಲಗದ್ದೆ, ಅಶೋಕ ಭಟ್ಟ ಸಿದ್ದಾಪುರ, ವೆಂಕಟೇಶ ಬೊಗ್ರಿಮಕ್ಕಿ, ಪ್ರಣವ ಭಟ್ಟ, ಅವಿನಾಶ ಕೊಪ್ಪ, ತುಳಸಿ ಹೆಗಡೆ ಪಾಲ್ಗೊಂಡರು. ಶಂಭು ಶಿಷ್ಯ ಪ್ರತಿಷ್ಠಾನ ಹಾಗೂ ಅತಿಥಿ ಕಲಾವಿದರು ಸಹಕಾರ ನೀಡಿದರು. ಎಂ.ಆರ್.ನಾಯ್ಕ ಕರ್ಸೆಬೈಲ ತಂಡ ಪ್ರಸಾದನ ವ್ಯವಸ್ಥೆ ಮಾಡಿತ್ತು. ಅರೆಹೊಳೆ ಸದಾಶಿವ ರಾವ್, ಗುಂಜಗೋಡ ಗಣಪತಿ ಹೆಗಡೆ ನಿರ್ವಹಿಸಿದರು. ವೇದಮೂರ್ತಿ ಅಡವಿತೋಟ ಕೃಷ್ಣ ಭಟ್ಟ ಹಾಗೂ ವಿನಾಯಕ ಹೆಗಡೆ ಕಲಗದ್ದೆ ಅವರು ಕಲಾವಿದರನ್ನು ಗೌರವಿಸಿದರು.