ಕುಮಟಾ: ಕರ್ನಾಟಕ ವಿಶ್ವವಿದ್ಯಾಲಯದ 2021-22 ನೇ ಸಾಲಿನ ಎರಡು ವರ್ಷಗಳ ನೂತನ ಬಿ.ಇಡಿ. 4ನೇ ಸೆಮಿಸ್ಟರಿನ ಪರೀಕ್ಷಾ ಫಲಿತಾಂಶವು ಪ್ರಕಟಗೊಂಡಿದ್ದು ಸ್ಥಳೀಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯವು ಅತ್ಯುತ್ತಮ ಫಲಿತಾಂಶವನ್ನು ಸಾಧಿಸಿದೆ. ಒಟ್ಟೂ 90 ವಿದ್ಯಾರ್ಥಿಗಳಲ್ಲಿ 82 ಶಿಕ್ಷಕ ವಿದ್ಯಾರ್ಥಿಗಳು 90% ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಿರುತ್ತಾರೆ. 07 ವಿದ್ಯಾರ್ಥಿಗಳು 90% ಕ್ಕಿಂತ ಹೆಚ್ಚು ಹಾಗೂ ಒಬ್ಬ ವಿದ್ಯಾರ್ಥಿ 80% ಅಂಕಗಳೊಂದಿಗೆ 100% ಫಲಿತಾಂಶವಾಗಿದೆ. ನಾಲ್ಕೂ ಸೆಮಿಸ್ಟರ್ ಸೇರಿ ಕುಮಾರಿ. ಸುಪ್ರಿಯಾ ಎ. ಶೆಟ್ಟಿ 92.25% ದೊಂದಿಗೆ ಪ್ರಥಮ ಸ್ಥಾನವನ್ನು, ಕುಮಾರಿ. ಶ್ರೀನವ್ಯಾ ವಿ. ಭಟ್ 91.58% ದೊಂದಿಗೆ ದ್ವಿತೀಯ ಸ್ಥಾನವನ್ನು ಹಾಗೂ ಕುಮಾರಿ. ನಾಗವೇಣಿ ಜಿ. ಪಟಗಾರ 91.05% ದೊಂದಿಗೆ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಇವರ ಸಾಧನೆಗಾಗಿ ಕೆನರಾ ಕಾಲೇಜು ಸೊಸೈಟಿ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ. ರಾಮಚಂದ್ರ ಆರ್. ಕಾಮತ್, ಉಪಾಧ್ಯಕ್ಷರಾದ ದಿನಕರ ಎಮ್. ಕಾಮತ್, ಕಾರ್ಯಾಧ್ಯಕ್ಷರಾದ ಹನುಮಂತ ಕೆ. ಶಾನಭಾಗ, ಕಾರ್ಯದರ್ಶಿಗಳಾದ ಯಶ್ವಂತ ವಿ. ಶಾನಭಾಗ ಮತ್ತು ಆಡಳಿತ ಮಂಡಳಿ ಸದಸ್ಯರು, ಕೌನ್ಸಿಲ್ ಸದಸ್ಯರು ಹಾಗೂ ಸಂಸ್ಥೆಯ ಪ್ರಾಚಾರ್ಯರಾದ ಡಾ. ಪ್ರೀತಿ ಪಿ. ಭಂಡಾರಕರ ಮತ್ತು ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿ ಹಾರೈಸಿರುತ್ತಾರೆ.