Slide
Slide
Slide
previous arrow
next arrow

ಕ್ರಿಕೆಟ್ ಪಂದ್ಯಾವಳಿ: ಸಿದ್ದಾಪುರ ಛಾಯಾಗ್ರಾಹಕರ ತಂಡ ಚಾಂಪಿಯನ್

300x250 AD

ಸಿದ್ದಾಪುರ: ತಾಲೂಕಾ ಛಾಯಾಗ್ರಾಹಕರ ಸಂಘದ ವತಿಯಿಂದ ಏರ್ಪಡಿಸಿದ್ದ ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಿದ್ದಾಪುರ ತಾಲೂಕಾ ಛಾಯಾಗ್ರಾಹಕರ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ತಾಲೂಕಿನ ಕಾನಳ್ಳಿ ಮೈದಾನದಲ್ಲಿ ಭಾನುವಾರ ನಡೆದ ಟೂರ್ನಿಯ ಅಂತಿಮ‌ ಪಂದ್ಯದಲ್ಲಿ ಸಿದ್ದಾಪುರ ತಂಡ ಹೊನ್ನಾವರ ತಂಡವನ್ನು ಸುಲಭವಾಗಿ ಮಣಿಸಿ ಪ್ರಶಸ್ತಿಗೆ ಮುತ್ತಿಕ್ಕಿತು. ಟಾಸ್ ಗೆದ್ದ ಹೊನ್ನಾವರ ತಂಡ ನಿಗದಿತ 5 ಓವರಗಳಲ್ಲಿ ಕೇವಲ 21 ರನ್ ಗಳಿಸಿದ್ದು 22 ರನ್ ಟಾರ್ಗೆಟ್ ಬೆನ್ನತಿದ ಸಿದ್ದಾಪುರ ತಂಡ 1.1 ಓವರಿನಲ್ಲಿ ವಿಕೆಟ್ ನಷ್ಟವಿಲ್ಲದೆ ಗೆಲುವಿನ ನಗೆ ಬೀರಿದೆ. ಪಂದ್ಯಾವಳಿಯ ಸರಣಿ ಸರ್ವೋತ್ತಮನಾಗಿ ಸಿದ್ದಾಪುರ ತಂಡದ ಹೇಮಂತ್ ತ್ಯಾರ್ಸಿ, ಬೆಸ್ಟ್ ಬೌಲರ್ ಆಗಿ ಸತೀಶ ಹಳ್ಳಿಬೈಲ್, ಬೆಸ್ಟ್ ಬ್ಯಾಟ್ಸಮನ್ ಆಗಿ ಹೊನ್ನಾವರ ತಂಡದ ಶ್ರೀದರ್ ಪ್ರಶಸ್ತಿ ಪಡೆದುಕೊಂಡರು. ಸಿದ್ದಾಪುರ ತಂಡ ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಿದ್ದು, ಕಳೆದ ಬಾರಿಯಂತೆ ಈ ಬಾರಿಯೂ ಸಿದ್ದಾಪುರ ಪ್ರಥಮ ಹಾಗೂ ಹೊನ್ನಾವರ ರನ್ನರ ಅಪ್ ಪ್ರಶಸ್ತಿ ಪಡೆದುಕೊಂಡಿದೆ.

ಉದ್ಘಾಟನೆ: ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಬೇಡ್ಕಣಿ ಗ್ರಾಪಂ ಸದಸ್ಯ ಕೃಷ್ಣಮೂರ್ತಿ ಕಡಕೇರಿ ಚಾಲನೆ ನೀಡಿ ಶುಭ ಕೋರಿದರು. ಮುಖ್ಯ ಅತಿಥಿಗಳಾಗಿ ಹಿರಿಯ ಛಾಯಾಗ್ರಾಹಕ ಸಿರೀಶ ಬೆಟಗೇರಿ, ಸಂಘದ ಉಪಾಧ್ಯಕ್ಷ ವಾಮನ ಅಂಬಿಗ, ಕುಮಟಾ ಸಂಘದ ಗಜು ನಾಯ್ಕ, ಪತ್ರಕರ್ತರಾದ ಯಶವಂತ ತ್ಯಾರ್ಸಿ ಹಾಗೂ ನಾಗರಾಜ ಮಾಳ್ಕೋಡ ಪಾಲ್ಗೊಂಡು ಶುಭ ಕೋರಿದರು.

300x250 AD

ಬಹುಮಾನ ವಿತರಣೆ: ಪಂದ್ಯಾವಳಿಯ ಮುಕ್ತಾಯ ಸಮಾರಂಭದಲ್ಲಿ ಹೊನ್ನಾವರ ಸಂಘದ ಸುರೇಶ ಹೊನ್ನಾವರ, ಸಿದ್ದಾಪುರ ತಾಲೂಕಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ದಿನೇಶ ನಾಯ್ಕ, ವಾಮನ ಅಂಬಿಗ, ದಯಾನಂದ ಕಡಕೇರಿ ಹಾಗೂ ಪತ್ರಕರ್ತ ಯಶವಂತ ನಾಯ್ಕ ಬಹುಮಾನ ವಿತರಿಸಿ ಅಭಿನಂದನೆ ಸಲ್ಲಿಸಿದರು. ತಾಲೂಕಾ ಛಾಯಾಗ್ರಾಹಕರ ಸಂಘದ ಕಾರ್ಯದರ್ಶಿ ಪ್ರವೀಣ್ ನಾಯ್ಕ ನಿರೂಪಿಸಿದರು.

Share This
300x250 AD
300x250 AD
300x250 AD
Back to top