Slide
Slide
Slide
previous arrow
next arrow

ಅರ್ಜುನ್ ಜನ್ಯರನ್ನು ಭೇಟಿಯಾದ ರಾಧಾಬಾಯಿ ದೇಶಪಾಂಡೆ

300x250 AD

ದಾಂಡೇಲಿ : ಅವರು ನಿತ್ಯ ರಾಜಕೀಯ, ಸಮಾಜ ಸೇವೆ, ಅಲ್ಲಿ ಕಾರ್ಯಕ್ರಮ, ಇಲ್ಲಿ ಕಾರ್ಯಕ್ರಮ, ಆ ಸಭೆ, ಈ ಸಭೆ ಎಂದು ಸದಾ ಒತ್ತಡದಲ್ಲಿಯೇ ಇರುವವರು. ಆದರೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ, ಧಾರ್ಮಿಕ ಆಚರಣೆ, ಪೂಜಾದಿ ಕಾರ್ಯಕ್ರಮಗಳಲ್ಲಿ ಮಾತ್ರ ಶ್ರದ್ಧೆಯಿಂದ ತಮ್ಮನ್ನು ತಾವು ತೊಡಗಿಸಿಕೊಳ್ಳುವ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ, ತಮ್ಮ ರಾಜಕೀಯದ ಒತ್ತಡದ ನಡುವೆಯು ಪತ್ನಿ ರಾಧಾಬಾಯಿಯವರ ಆಸಕ್ತಿಗೆಂದೂ ಅಡ್ಡಿ ಪಡಿಸಿದವರಲ್ಲ. ಹಾಗಾಗಿ ರಾಧಾಬಾಯಿ ದೇಶಪಾಂಡೆ ಆಗಾಗ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಸಮಯ ಸಿಕ್ಕಾಗಲೆಲ್ಲಾ ಚಲನಚಿತ್ರ ನೋಡುತ್ತಾರೆ. ಇನ್ನೂ ಸಂಗೀತ ಕಾರ್ಯಕ್ರಮವನ್ನಂತು ಅಭಿಮಾನ ಮತ್ತು ಗೌರವದಿಂದ ‌ನೋಡುವ ಹವ್ಯಾಸವನ್ನು ರೂಡಿಸಿಕೊಂಡಿದ್ದಾರೆ. ವಿಶೇಷವಾಗಿ ಗಾಯಕರು ಸಂಗೀತ ನಿರ್ದೇಶಕರ ಬಗ್ಗೆ ವಿಶೇಷವಾದ ಗೌರವವನ್ನು ಇಟ್ಟುಕೊಂಡಿರುವವರು ರಾಧಾಬಾಯಿ ದೇಶಪಾಂಡೆ.

ಸಾಂಸ್ಕೃತಿಕ ಮಹೋತ್ಸವದ ಅಂಗವಾಗಿ ಹುಬ್ಬಳ್ಳಿಗೆ ಆಗಮಿಸಿದ್ದ ‌ನಾಡಿನ ಖ್ಯಾತ ಗಾಯಕ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರನ್ನು ರಾಧಾಬಾಯಿ.ಆರ್.ದೇಶಪಾಂಡೆ ಭೇಟಿಯಾಗಿ ಅವರ ಕಲಾ ಸೇವೆಯನ್ನು ಕೊಂಡಾಡಿದರು. ಇದೇ ಸಂದರ್ಭದಲ್ಲಿ ಅರ್ಜುನ್ ಜನ್ಯ ರಾಧಾಬಾಯಿ ದೇಶಪಾಂಡೆಯವರಿಗೆ ತಾಯಿ ಗೌರವವನ್ನು ನೀಡಿ, ಆರ್.ವಿ.ದೇಶಪಾಂಡೆ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

300x250 AD
Share This
300x250 AD
300x250 AD
300x250 AD
Back to top