Slide
previous arrow
next arrow

ಶ್ರೀನಿಕೇತನ ಸಾಂಸ್ಕೃತಿಕೋತ್ಸವ ಯಶಸ್ವಿ

300x250 AD

ಮಳಗಿ: ಮಳಗಿಯಲ್ಲಿ ಶ್ರೀನಿಕೇತನ ಪೂರ್ವಪ್ರಾಥಮಿಕ ಶಾಲೆಯ ವಾರ್ಷಿಕ ಸಾಂಸ್ಕೃತಿಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷರು ಶ್ರೀಮತಿ ಕಸ್ತೂರಿ ತಳವಾರ ಅತಿಥಿಗಳಾಗಿ ಆಗಮಿಸಿದ್ದರು. ನಿವೃತ್ತ ಮುಖ್ಯಾಧ್ಯಾಪಕ ಎಸ್.ಜಿ. ಬಾಳಗೋಡ ಸಮಸ್ತ ಗಣ್ಯರನ್ನು ಸ್ವಾಗತಿಸಿದರು. ಶಾಲೆಯ ಕಾರ್ಯದರ್ಶಿಗಳು ಪ್ರೊ. ಕೆ.ಎನ್.ಹೊಸಮನಿ ಪ್ರಾಸ್ತಾವಿಕ ನುಡಿಯನ್ನು ನೀಡಿದರು. ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರು ಮೇಜರ್ ರಘುನಂದನ ಹೆಗಡೆ, ಸದಸ್ಯರಾದ ಪ್ರಶಾಂತ ಹೆಗಡೆ, ಆರ್.ಎಸ್. ಹೆಗಡೆ, ಶಾಲೆಯ ಆಡಳಿತ ಉಪಸಮಿತಿಯ ಸದಸ್ಯರು ಅರವಿಂದ ಗುಡವಿ ಹಾಗೂ ಕೃಷ್ಣಮೂರ್ತಿ ಕಲ್ಕೂರ್ ಉಪಸ್ಥಿತರಿದ್ದರು. ಶಾಲೆಯ ಪುಟಾಣಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು. ಶಿಕ್ಷಕಿಯರು ಶ್ರೀಮತಿ ಪ್ರವೀಣಾ ಹೆಗಡೆ ಹಾಗೂ ಶ್ರೀಮತಿ ನಯನಾ ಕೊಳಗಿ ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಶಾಲೆಯ ಪ್ರಾಂಶುಪಾಲ ವಸಂತ್ ಭಟ್ ವಂದಿಸಿದರು. ತದನಂತರ ಪೂರ್ವ ಪ್ರಾಥಮಿಕ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆದವು.

300x250 AD
Share This
300x250 AD
300x250 AD
300x250 AD
Back to top