Slide
Slide
Slide
previous arrow
next arrow

ಅಯೋಧ್ಯೆ ರಾಮದರ್ಶನ ಮಾಡಿ ಬಂದವರಿಗೆ ಸನ್ಮಾನ

300x250 AD

ಹೊನ್ನಾವರ: ಅಯೋಧ್ಯೆ ರಾಮ ಪ್ರತಿಷ್ಠಾಪನೆಯ ನಂತರ ಭಕ್ತಾದಿಗಳು ಸಾಗರೊಪಾದಿಯಲ್ಲಿ ಆಗಮಿಸಿ ರಾಮನ ದರ್ಶನ ಪಡೆಯುತ್ತಿದ್ದಾರೆ. ತಾಲೂಕಿನಿಂದಲೂ ಕೂಡ ರಾಮನ ಭಕ್ತರು ಅಯೋದ್ಯೆಗೆ ಹೋಗಿ ಮೊದಲದಿನವೇ ರಾಮನ ದರ್ಶನ ಮಾಡಿ ಬಂದವರಿಗೆ ಹೊನ್ನಾವರ ನಾಮಧಾರಿ ಹಿತರಕ್ಷಣಾ ವೇದಿಕೆಯವರು ಸನ್ಮಾನ ಮಾಡಿ ಗೌರವಿಸಿದೆ.

ತಾಲೂಕಿನ ಮಾವಿನಕುರ್ವಾದ ಹರಿಶ್ಚಂದ್ರ ಜಿ. ನಾಯ್ಕ, ವಿವೇಕ ಗೌಡ, ಧರ್ಮ ನಾಯ್ಕ, ಮಂಕಿಯ ರಾಘವೇಂದ್ರ ಆರ್. ನಾಯ್ಕ, ರಘು ಖಾರ್ವಿ, ಕರ್ಕಿಯ ಕುಮಾರ ಶೇಟ್, ಎಂ. ಟಿ. ನಾಯ್ಕ ಅಯೋದ್ಯೆ ರಾಮನ ದರ್ಶನ ಮಾಡಿ ಬಂದವರಾಗಿದ್ದಾರೆ. ಇವರೆಲ್ಲರನ್ನು ನಾಮಧಾರಿ ಸಮುದಾಯ ಭವನದಲ್ಲಿ ಸನ್ಮಾನ ಮಾಡಿ ಸತ್ಕರಿಸಲಾಗಿದೆ.

300x250 AD

ಈ ಸಂದರ್ಭದಲ್ಲಿ ಮಾಜಿ ಸಚಿವರು ಹಿರಿಯ ನ್ಯಾಯದೀಶರಾದ ಆರ್. ಎನ್. ನಾಯ್ಕ, ಹಳದಿಪುರ ಗ್ರಾ. ಪಂ. ಉಪಾಧ್ಯಕ್ಷರಾದ ಅಜಿತ್ ನಾಯ್ಕ, ನಾರಾಯಣ ಗುರು ಸಮಿತಿಯ ಅಧ್ಯಕ್ಷರಾದ ಧನಂಜಯ ನಾಯ್ಕ, ನಾಮಧಾರಿ ಹಿತರಕ್ಷಣೆ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ, ನ್ಯಾಯವಾದಿ ವಿಕ್ರಂ ನಾಯ್ಕ, ಕಾರ್ಮಿಕ ಸಂಘದ ಅಧ್ಯಕ್ಷರಾದ ಹರಿಶ್ಚಂದ್ರ ನಾಯ್ಕ ಕರ್ಕಿ ಇದ್ದರು.

Share This
300x250 AD
300x250 AD
300x250 AD
Back to top