Slide
Slide
Slide
previous arrow
next arrow

ಪೋಲಿಸ್ ಇಲಾಖೆ ಪರೀಕ್ಷೆ: ಬಸ್‌ ನಿಲ್ದಾಣದಲ್ಲಿ ಜನಸಂದಣಿ

300x250 AD

ಕಾರವಾರ: ಪೊಲಿಸ್ ಇಲಾಖೆಯ ಕಾನ್‌ಸ್ಟೇಬಲ್ ಹುದ್ದೆಗೆ ನಗರದಲ್ಲಿ ನಡೆದ ಪರೀಕ್ಷೆಗೆ ಆಗಮಿಸಿದ್ದ ಸಾವಿರಾರು ಅಭ್ಯರ್ಥಿಗಳು ವಾಪಸ್ ತೆರಳಲು ಬಸ್ ನಿಲ್ದಾಣದಲ್ಲಿ ಜಮಾಯಿಸಿದ್ದರು.

ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಸಶಸ್ತ್ರ ಮೀಸಲು ಪಡೆಯ ಕಾನ್‌ಸ್ಟೇಬಲ್ ಹುದ್ದೆಗೆ ಪರೀಕ್ಷೆ ನಡೆದಿದ್ದು, ಮಧ್ಯಾಹ್ನ 1 ಗಂಟೆ ಬಳಿಕ ಹೊರ ಜಿಲ್ಲೆಗಳಿಂದ ಬಂದ ಅಭ್ಯರ್ಥಿಗಳು ವಾಪಸ್ ತೆರಳಲು ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತ ನಿಂತಿದ್ದರು. ಜೊತೆಗೆ ರವಿವಾರ ನಡೆಯುವ ಸಂತೆಗೆ ಗ್ರಾಮೀಣ ಭಾಗದಿಂದ ಬಂದಿದ್ದ ಜನರು ಸೇರಿ ಬಸ್ ನಿಲ್ದಾಣದ ಪ್ರಯಾಣಿಕರಿಂದ ತುಂಬಿ ತುಳುಕುತ್ತಿತ್ತು. ಹೊರ ಜಿಲ್ಲೆಗಳಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿದ್ದರೂ ನೂಕುನುಗ್ಗಲು ಉಂಟಾಗಿತ್ತು. ಬಸ್ ಒಳಗೆ ಕುಳಿತುಕೊಳ್ಳಲು ಆಸನ ಹಿಡಿಯಲು ಅಭ್ಯರ್ಥಿಗಳು ಬಸ್ ಹಿಂದೆ ಓಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

300x250 AD
Share This
300x250 AD
300x250 AD
300x250 AD
Back to top