Slide
Slide
Slide
previous arrow
next arrow

ಜಾನಪದ ಸಾವಿರದ ಸಾಹಿತ್ಯ: ದಿವಸ್ಪತಿ ಭಟ್

300x250 AD

ಶಿರಸಿ: ಜೀವನಾನುಭವದ ಮೂಸೆ ಹುಟ್ಟಿದ, ಜನರಿಂದ ಜನರಿಗೆ ತಲುಪುವ ಜ್ಞಾನದ ಸಂಪನ್ಮೂಲವೇ ಜಾನಪದ. ಜನರಿರುವ ತನಕ ಜಾನಪದವಿರುತ್ತದೆ. ಜಾನಪದ ಕಲೆಯನ್ನು ಅಳಿಸುವುದು ಅಸಾಧ್ಯ. ಸಾವಿರದ ಸಾಹಿತ್ಯವಿದು. ಶಬ್ದ ಒಂದಾದರೂ ಹಲವಾರು ಅರ್ಥಕೊಡುವ ಶಬ್ದ ಮತ್ತು ಶಕ್ತಿ ಹಾಗೂ ವಿಶಿಷ್ಟ ಶೈಲಿ ಜಾನಪದಕ್ಕಿದೆ. ಸಾಹಿತ್ಯ ರಚಿತವಾಗಬೇಕಾದರೆ ಶಬ್ದ ಬಂದಾಗ ಬಳಸಿಕೊಳ್ಳಬೇಕು ಕಡೆಗೆ ಹುಡುಕಿದರೂ ಸಿಗದು, ಎಂದು ಬರಹಗಾರ ದಿವಸ್ಪತಿ ಭಟ್ ಅಭಿಪ್ರಾಯ ಪಟ್ಟಿದ್ದಾರೆ.

ಅವರು, ಶಿರಸಿಯ ನೆಮ್ಮದಿ ಕುಠೀರದಲ್ಲಿ ನಡೆದ ಸಾಹಿತ್ಯ ಚಿಂತಕರ ಚಾವಡಿಯ ಆಶ್ರಯದಲ್ಲಿ ನಡೆದ ಎಸ್.ಎಮ್.ಹೆಗಡೆಯವರ “ಮೊಗ್ಗಿನಮಾಲೆ” ಕವನ ಸಂಕಲನ ಬಿಡುಗಡೆ ಮತ್ತು ಜಾನಪದ ಕವಿಗೋಷ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಈ ರೀತಿಯಾಗಿ ಅಭಿಪ್ರಾಯಪಟ್ಟರು.
ಆಡುಭಾಷೆ ಅಥವಾ ಮಾತೃಭಾಷೆಯಲ್ಲಿ ಹುಟ್ಟಿದ ಸಾಹಿತ್ಯವೇ ಜನಪದ. ಲಿಪಿ ಇರದ ಕಾಲದಲ್ಲಿಯೇ ಸೃಷ್ಠಿಯಾದ ಸಾಹಿತ್ಯವೇ ಜನಪದ. ಅಷ್ಟೊಂದು ಪುರಾತನವಾದದ್ದು ಎಂದು ಸಾಹಿತ್ಯ ಚಿಂತಕರ ಚಾವಡಿಯ ಸಂಸ್ಥಾಪಕರಾದ ಎಸ್.ಎಸ್.ಭಟ್ ಹೇಳಿದರು.
ಪುಸ್ತಕ ಬಿಡುಗಡೆ ಮಾಡಿ ಮಾತನ್ನಾಡಿದ ಕಥೆಗಾರ ಕೆ.ಮಹೇಶ ಮಾತನ್ನಾಡಿ ಸಂವೇದನಾಶೀಲ ಮನಸ್ಥಿತಿ ಎಲ್ಲರಿಗಿರುವುದಿಲ್ಲ. ನಾಗರಿಕ ಬದುಕಿನಲ್ಲಿ ಮನುಷ್ಯನಿಗೆ ಒಳ್ಳೆಯ ಹವ್ಯಾಸವೊಂದಿದ್ದರೆ ಮಾತ್ರ ಜೀವನ ಸಾರ್ಥಕ. ಎಸ್.ಎಮ್.ಹೆಗಡೆಯವರ ಮೊಗ್ಗಿನ ಮಾಲೆಯು ಹೂವರಳಿ ಜಗದಾದ್ಯಂತ ಸುಗಂಧ ಪಸರಿಸಲಿ, ಎಂದರು. ಕೃತಿಯನ್ನು ಪರಿಚಯಿಸಿದ ದತ್ತಗುರು ಕಂಠಿಯವರು, ನಮ್ಮ ಜೀವನಾನುಭವವನ್ನೆಲ್ಲವ ಕಡೆದು ತಿಳಿಗೊಳಿಸಿ ಆ ಸಾರ ಸತ್ವವನ್ನೆಲ್ಲವ ಸಾಹಿತ್ಯ ರಚಿಸುವ ಮುಖೇನ ಓದುಗರ ಮುಂದಿಡುವ ಪ್ರಯತ್ನ ಅದ್ಭುತವೇ ಸರಿ. ಮಾಗಿದ ಹಣ್ಣು ಮಾತ್ರ ತಿನ್ನಲು ಸವಿ. ಮಾಗಿದ ಮನಸ್ಸಿನಲ್ಲಿ ಅಥವಾ ಮಾಗಿದ ವಯಸ್ಸಿನಲ್ಲಿ ಉತ್ಪತ್ತಿಯಾದ ಸಾಹಿತ್ಯ ಸಹ ಓದುಗರಿಗೆ ರುಚಿಸುವ ಜೊತೆಗೆ ಬಹುಕಾಲ ಬಾಳುತ್ತದೆ, ಎಂದು ಅಭಿಪ್ರಾಯಪಟ್ಟರು.

300x250 AD

ಮಂಜುನಾಥ ಹೆಗಡೆ ಹೂಡ್ಲಮನೆ ಅಧ್ಯಕ್ಷತೆ ವಹಿಸಿದ್ದರು. ಕೃತಿಕಾರ ಎಸ್.ಎಮ್.ಹೆಗಡೆ, ದಾಕ್ಷಾಯಿಣಿ ಪಿ.ಸಿ , ನಿರ್ಮಲಾ ಸಂಪೇಕಟ್ಟು ಮತ್ತು ಶೋಭಾ ಭಟ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಾಹಿತ್ಯ ಚಿಂತಕರ ಚಾವಡಿ ಬಳಗದಿಂದ ಕೃತಿಕಾರ ಎಸ್.ಎಮ್.ಹೆಗಡೆ ಇವರನ್ನು ಸನ್ಮಾನಿಸಲಾಯಿತು. ಬಳಿಕ ನಡೆದ ಜಾನಪದ ಕವಿಗೋಷ್ಠಿಯಲ್ಲಿ ರೇವತಿ ಹೊಸ್ಕೆರೆ, ಶೋಭಾ ಭಟ್, ಸುಜಾತ ದಂಟಕಲ್, ಉಮೇಶ ದೈವಜ್ಞ, ರೋಹಿಣಿ ಹೆಗಡೆ, ದಿವ್ಯಾ ಹೆಗಡೆ, ಗಣೇಶ ಬಿಳೇಕಲ್, ರಾಜಲಕ್ಷ್ಮಿ ಭಟ್, ರಾಜೇಶ್ವರಿ ಹೆಗಡೆ, ಸುನೀತಾ ಹೆಗಡೆ,, ಜಲಜಾಕ್ಷಿ ಶೇಟ್ಟಿ, ಹನುಮಂತ ಸಾಲಿ, ಎಸ್.ಎಮ್ ಹೆಗಡೆ, ಅಪರ್ಣಾ ಹೆಗಡೆ, ಸೌಮ್ಯಾ ನಾಯ್ಕ, ದಾಕ್ಷಾಯಿಣಿ ಪಿ.ಸಿ, ಯಮುನಾ ಹೆಗಡೆ, ಟಿ.ಎಸ್.ಅಗ್ನಿಹೋತ್ರಿ, ಡಿ.ಎಸ್.ಭಟ್ ಓಡಲಮನೆ, ಅಜಿತ ಬಿಳಗಿ, ನಿರ್ಮಲ ಸಂಪೇಗದ್ದೆ ಮತ್ತು ಗಿರಿಜಾ ಹೆಗಡೆ ಇವರುಗಳು ತಂತಮ್ಮ ಸ್ವರಚಿತ ಜಾನಪದಗೀತೆಗಳನ್ನು ಪ್ರಸ್ತುತಪಡಿಸಿದರು. ಉಪನ್ಯಾಸಕಿ ಭವ್ಯಾ ಹಳೆಯೂರು ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ರೇವತಿ ಭಟ್ ವಂದಿಸಿದರು.

Share This
300x250 AD
300x250 AD
300x250 AD
Back to top