ಸಿದ್ದಾಪುರ: ಸದೃಢವಾದ ಹಾಗೂ ಆರೋಗ್ಯವಂತ ದೇಹವನ್ನು ನಿರ್ಮಿಸಿಕೊಳ್ಳಬೇಕಾದರೆ ನಾವು ನಮಗಿಷ್ಟವಾದ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಶಿರಸಿ ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ್ ಹೇಳಿದರು.
ಅವರು ತಾಲೂಕಿನ ಬಿಳಿಗಿಯಲ್ಲಿ ಹೊಸ ಮಂಜು ಗೆಳೆಯರ ಬಳಗದ ವತಿಯಿಂದ ಗಣರಾಜ್ಯೋತ್ಸವದ ದಿನದಂದು ಆಯೋಜಿಸಿದ್ದ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿ, ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡು ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಬೇಕಾದ ಜವಾಬ್ದಾರಿ ಕ್ರೀಡಾಪಟುಗಳ ಮೇಲಿದೆ, ಕಾರ್ಯಕ್ರಮವನ್ನು ಆಯೋಜಿಸುವುದು ಕಷ್ಟಕರ ಕೆಲಸ ಆದರೂ ಇಂದಿನ ದಿನದಲ್ಲಿ ಹೆಚ್ಚು ಹೆಚ್ಚು ಪಂದ್ಯಾವಳಿಗಳು ಆಯೋಜಿಸುತ್ತಿರುವುದಕ್ಕೆ ಸಂತೋಷವೆನಿಸುತ್ತದೆ, ಕ್ರೀಡೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾದದ್ದು ಯುವಕರ ಜವಾಬ್ದಾರಿಯಾಗಿದೆ ಕ್ರೀಡೆಯ ಜೊತೆಗೆ ಧಾರ್ಮಿಕ ಸಂಸ್ಕೃತಿಕ ಹಾಗೂ ಊರಿನ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಆದ್ಯತೆ ನೀಡಿ ಎಂದರು. ಕಾಂಗ್ರೆಸ್ ಮುಖಂಡ ವಸಂತ ನಾಯ್ಕ್ ಮನಮನೆ ಕ್ರೀಡಾಂಗಣವನ್ನು ಉದ್ಘಾಟನೆಗೊಳಿಸಿದರು. ವಕೀಲ ಹಾಗೂ ಕಾಂಗ್ರೆಸ್ ಮುಖಂಡ ಜಿ.ಟಿ. ನಾಯ್ಕ್ ಮಣಕಿನಗುಳಿ ಟ್ರೋಫಿ ಅನಾವರಣಗಳಿಸಿದರು.
ಕಾರ್ಯಕ್ರಮದಲ್ಲಿ ಆಯ್ದ ಸ್ಥಳೀಯ ಕೊನೆ ಗೌಡರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಗಾಂಧೀಜಿ ನಾಯ್ಕ್, ರಾಜು ನಾಯ್ಕ್ ಹೊಸಮಂಜು, ಎಂ.ಜಿ.ನಾಯ್ಕ್ ಹಾದ್ರಿಮನೆ, ವಿ.ಎನ್. ನಾಯ್ಕ್, ರಾಜು ಕತ್ತಿ, ಗಣೇಶ್ ನಾಯ್ಕ್ ಮನ್ಮನೆ, ಕೆ.ಆರ್. ವಿನಾಯಕ, ತಾಲೂಕಿನ ಗಣ್ಯರು ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು ಗೆಳೆಯರ ಬಳಗದ ಪದಾಧಿಕಾರಿಗಳು ಕಬಡ್ಡಿ ಅಭಿಮಾನಿಗಳು ಉಪಸ್ಥಿತರಿದ್ದರು.