Slide
Slide
Slide
previous arrow
next arrow

ಶ್ರೀನರೇಂದ್ರ ಮಹಾರಾಜರ ಪಾದುಕಾ ಮೆರವಣಿಗೆ: ಗುರುಪೂಜಾ ಕಾರ್ಯಕ್ರಮ

300x250 AD

ಜೊಯಿಡಾ: ತಾಲೂಕಿನ ಕುಂಬಾರವಾಡಾದಲ್ಲಿ ಶ್ರೀ ನರೇಂದ್ರ ಮಹಾರಾಜರ ಸಂಸ್ಥಾನ ನಾಣಿಜ ಧಾಮ ರತ್ನಾಗಿರಿ ಅವರ ಸಿದ್ದ ಪಾದುಕಾ ದರ್ಶನ ಕಾರ್ಯಕ್ರಮ ಭಕ್ತಿಯಿಂದ ಶುಕ್ರವಾರ ಜರುಗಿತು. ಜೋಯಿಡಾ ತಾಲೂಕಿನ ಹಾಗೂ ಬೇರೆ ತಾಲೂಕು, ಜಿಲ್ಲೆಗಳಿಂದ ಬಂದ ಸಾವಿರಾರು ಭಕ್ತರು ನಾಣಿಜಧಾಮದಿಂದ ಬಂದ ಅರ್ಚಕರ ಮಾರ್ಗದರ್ಶನದಲ್ಲಿ ಸರತಿಯ ಸಾಲಿನಲ್ಲಿ ಕುಳಿತು ಭಕ್ತಿಯಿಂದ ಗುರುಪೂಜೆ ಮಾಡಿದರು.

ಇದಕ್ಕೂ ಮೊದಲು ಮಹಾಸತಿ ದೇವಸ್ಥಾನದಿಂದ ಕ್ಷೇತ್ರಪಾಲ ದೇವಸ್ಥಾನ ಮೈದಾನವರೆಗೆ ಭವ್ಯ ಮೆರವಣಿಗೆ ನಡೆಸಲಾಯಿತು. ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆಯಲ್ಲಿ ಮಹಿಳೆಯರು ಪೂರ್ಣಕುಂಭ ಕಲಶದೊಂದಿಗೆ ಭಾಗವಹಿಸಿದ್ದರು.

300x250 AD

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪ್ರವೀಣ್ ನಾಯ್ಕ, ನಾಗೋಡಾ ಗ್ರಾ.ಪಂ.ಮಾಜಿ ಅ. ದಿಗಂಬರ ದೇಸಾಯಿ, ಕುಣಬಿ ಸಮಾಜ ಜಿಲ್ಲಾಧ್ಯಕ್ಷ ಸುಭಾಷ್ ಗಾವಡಾ, ಪ್ರವಚನಕಾರ ವಜ್ರಕಾಂತ ದಾಸ ಮಹಾರಾಜರು, ಉತ್ತರ ಕನ್ನಡ ಪೂರ್ವ ಜಿಲ್ಲಾ ನಿರೀಕ್ಷಕ ಸದಾನಂದ ನಾಯ್ಕ, ಪಶ್ಚಿಮ ನಿರೀಕ್ಷಕ ತುಷಾರ ಮೊರ್ಯೆ, ಜಿಲ್ಲಾಧ್ಯಕ್ಷ ಬಾಬು ದೇವಳಿ, ತಾಲೂಕು ಅಧ್ಯಕ್ಷ ವಿಕಾಸ ವೆಳಿಪ್, ಅನಂತ ಗಾವಡಾ, ಪ್ರಕಾಶ ಮಿರಾಶಿ , ಸಂದೀಪ ನಗರಿ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಾಗವಹಿಸಿದ್ದರು.

Share This
300x250 AD
300x250 AD
300x250 AD
Back to top