Slide
Slide
Slide
previous arrow
next arrow

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಸೇವೆ ಸಿಗಬೇಕು : ಡಾ. ರಾಜೇಶ ಕಿಣಿ

300x250 AD

ಹೊನ್ನಾವರ : ಭಾರತದ ಸಂವಿಧಾನದ ಅಡಿಯಲ್ಲಿ ನಾವೆಲ್ಲ ಕಾರ್ಯನಿರ್ವಹಿಸುತ್ತಿದ್ದೇವೆ. ಸಂವಿಧಾನದಲ್ಲಿರುವ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಸರಿಯಾದ ಅರಿವು ನಮಗಿರಬೇಕು. ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿರುವದರಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಉತ್ತಮ ಆರೋಗ್ಯ ಸೇವೆ ದೊರಕಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ನಮ್ಮದಾಗಬೇಕು. ಸಾರ್ವಜನಿಕರೊಡನೆ ಉತ್ತಮ ಸೌಹಾರ್ದ ಸಂವಹನ ಕಾಪಾಡಿಕೊಳ್ಳಬೇಕು. ಆಸ್ಪತ್ರೆಯ ನಾನ್ ಕ್ಲಿನಿಕ್ ಸಿಬ್ಬಂದಿಗಳ ಪರಿಶ್ರಮದಿಂದಾಗಿ ಇವತ್ತು ನಮ್ಮ ಆಸ್ಪತ್ರೆ ಸ್ವಚ್ಛತೆ, ಸುಂದರ ವಾತಾವರಣ ಕಾಪಾಡಿಕೊಳ್ಳಲು ಕಾರಣವಾಗಿದೆ ಎಂದು ತಾಲೂಕ ಆಸ್ಪತ್ರೆ ಆಡಳಿತಾಧಿಕಾರಿ ಡಾ. ರಾಜೇಶ ಕಿಣಿ ಹೇಳಿದರು.

ಅವರು ಆಸ್ಪತ್ರೆಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಿ ನಾವೆಲ್ಲ ಸೇರಿ ಆಸ್ಪತ್ರೆಯ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡೋಣ. ಆರೋಗ್ಯಯುತ ಸಮಾಜ ಕಟ್ಟುವಲ್ಲಿ ಕಂಕಣ ಬದ್ಧರಾಗೋಣ. ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಬದುಕೋಣ.ಸಂವಿಧಾನವನ್ನು ಗಟ್ಟಿಗೊಳಿಸೋಣ ಎಂದರು.

300x250 AD

ಈ ಸಂದರ್ಭದಲ್ಲಿ ಆಸ್ಪತ್ರೆಯ ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರ ವಹಿಸುವ 21 ನಾನ್ ಕ್ಲಿನಿಕ್ ಸಿಬ್ಬಂದಿಗಳಿಗೆ ಶಾಲು ಹೊದಿಸಿ ನಗದು ನೀಡಿ ಸನ್ಮಾನಿಸಲಾಯಿತು. ನಂತರ ಆಸ್ಪತ್ರೆಯ ಎಲ್ಲ ವೈದ್ಯರು ಸಿಬ್ಬಂದಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು. ವೈದ್ಯರುಗಳ ವಿಭಾಗದಲ್ಲಿ ಡಾ. ಮಂಜುನಾಥ ಶೆಟ್ಟಿ, ಡಾ. ರಾಜೇಶ ಕಿಣಿ, ಶುಶ್ರೂಷಾಧಿಕಾರಿಗಳ ವಿಭಾಗದಲ್ಲಿ ಅಶ್ವಿನಿ ಪಟಗಾರ, ಮಂಗಲಾ ನಾಯ್ಕ, ಡಾಟಾಎಂಟ್ರಿ ವಿಭಾಗದಲ್ಲಿ ಪದ್ಮಶ್ರೀ ಕೋಲೋರ್ಸಕರ,ಅನುಷಾ ಸಾರಂಗ,ನಾನ್ ಕ್ಲಿನಿಕ್ ವಿಭಾಗದಲ್ಲಿ ಶಕುಂತಲಾ, ಮಂಜುಳಾ, ಜನರಲ್ ವಿಭಾಗದಲ್ಲಿ ಗಣೇಶ ಮುಕ್ರಿ, ಹರ್ಷ ರವರು ಗೆದ್ದು ಬಹುಮಾನ ಪಡೆದರು. ಸಿಬ್ಬಂದಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.ಸಹಾಯಕ ಆಡಳಿತಾಧಿಕಾರಿ ಶಶಿಕಲಾ ನಾಯ್ಕ ಸೇರಿದಂತೆ ಎಲ್ಲ ತಜ್ಞ ವೈದ್ಯರುಗಳು, ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರಾಜ್ಯ ಸರಕಾರಿ ನೌಕರರ ಸಂಘದ ಉಪಾಧ್ಯಕ್ಷರಾದ ಚಂದ್ರೇಖರ ಕಳಸ ಕಾರ್ಯಕ್ರಮ ನಿರ್ವಹಿಸಿದರು.

Share This
300x250 AD
300x250 AD
300x250 AD
Back to top