ಯಲ್ಲಾಪುರ: ಉತ್ತರ ಕನ್ನಡ ಜಿಲ್ಲಾ ಪಂಚಾಯತ, ಕೃಷಿ ಇಲಾಖೆ ಯಲ್ಲಾಪುರ, ಗ್ರಾಮ ಪಂಚಾಯತ್ ಹಾಸಣಗಿ, ಸರ್ವಜ್ಞೇಂದ್ರ ರೈತ ಉತ್ಪಾದಕ ಕಂಪನಿ ಉಮ್ಮಚಗಿ ಹಾಗೂ ಶಾಂತಲಾ ಆರ್ಗಾನಿಕ್ ಪ್ರಾಡಕ್ಟ್ ಹೊನ್ನಳ್ಳಿ ಸಂಯುಕ್ತ ಆಶ್ರಯದಲ್ಲಿ ಕಿಸಾನ್ ಗೋಷ್ಠಿ, ಬೆಲ್ಲ ಮೇಳ ಹಾಗೂ ಆಲೆಮನೆ ಹಬ್ಬವನ್ನು ಜ.27, ಶನಿವಾರ ಮಧ್ಯಾಹ್ನ 3.30ಕ್ಕೆ ತಾಲೂಕಿನ ಹೊನ್ನಳ್ಳಿ, ಹಾಸಣಗಿಯಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ಶಾಸಕ ಶಿವರಾಮ ಹೆಬ್ಬಾರ್ ಉದ್ಘಾಟಿಸಲಿದ್ದು, ಹಾಸಣಗಿ ಗ್ರಾ.ಪಂ. ಅಧ್ಯಕ್ಷೆ ವಿನೋದಾ ಪೂಜಾರಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಂತಾರಾಮ ಸಿದ್ದಿ ಆಗಮಿಸಲಿದ್ದು, ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಡಾ.ಹೊನ್ನಪ್ಪ ಗೌಡ, ಟಿಎಂಎಸ್ ಅಧ್ಯಕ್ಷ ನಾರಾಯಣ ಭಟ್ ಅಗ್ಗಾಶಿಕುಂಬ್ರಿ, ಎಚ್.ಎಸ್.ಎಸ್.ಹಾಸಣಗಿ ಅಧ್ಯಕ್ಷ ಆರ್.ಎನ್.ಹೆಗಡೆ ಗೋರ್ಸಗದ್ದೆ, ವಿ.ಎಸ್.ಎಸ್ ಉಮ್ಮಚಗಿ ಅಧ್ಯಕ್ಷ ಎಂ.ಜಿ.ಭಟ್ ಸಂಕದಗುಂಡಿ, ಪರಿಸರ ತಜ್ಞ ಶಿವಾನಂದ ಕಳವೆ ಉಪಸ್ಥಿತರಿರಲಿದ್ದಾರೆ.
ವಿಶೇಷ ಆಕರ್ಷಣೆಯಾಗಿ ಬೆಲ್ಲ ಮೇಳ, ಆಲೆಮನೆ ಹಬ್ಬ ಆಯೋಜನೆಗೊಂಡಿದ್ದು, ಸ್ಥಳೀಯ ಕಬ್ಬಿನ ತಳಿಗಳ ಪ್ರದರ್ಶನ ಹಾಗೂ ವಿವಿಧ ವಿಷಯಗಳ ಕುರಿತು ಉಪನ್ಯಾಸ ನಡೆಯಲಿದ್ದು,ಸಂಪನ್ಮೂಲ ವ್ಯಕ್ತಿಗಳಾಗಿ ಸಹಾಯಕ ಪ್ರಾಧ್ಯಾಪಕ ಡಾ.ಮಧುಕೇಶ್ವರ ಹೆಗಡೆ, ಕೃಷಿ ತಜ್ಞ ಡಾ.ವಿ.ಎಮ್.ಹೆಗಡೆ ಆಗಮಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಚಂದಗಾಣಿಸಲು ಸಂಘಟಕರು ಕೋರಿದ್ದಾರೆ.