Slide
Slide
Slide
previous arrow
next arrow

ಮತದಾರರಲ್ಲಿ ಮತದಾನ ಮೌಲ್ಯದ ಅರಿವು ಮೂಡಬೇಕು: ಹಳ್ಳಕಾಯಿ

300x250 AD

ಯಲ್ಲಾಪುರ: ಮತದಾರರು ಆಸೆ, ಆಮಿಷಗಳಿಗೆ ಬಲಿಯಾಗದೇ ನಿರ್ಭೀತವಾಗಿ ಮತದಾನ ಮಾಡಲು ಜಾಗೃತಿಗೊಳಿಸಲು ಮತದಾರರ ದಿನ ಆಚರಿಸಲಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಜಿ.ಬಿ. ಹಳ್ಳಕಾಯಿ ಹೇಳಿದರು.

ಅವರು ಪಟ್ಟಣದ ತಹಸೀಲ್ದಾರ ಕಚೇರಿಯ ಸಭಾಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕಾಡಳಿತ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. ಮತದಾರರಲ್ಲಿ ಮತದಾನದ ಮೌಲ್ಯ, ಮಹತ್ವದ ಕುರಿತು ಅರಿವು ಮೂಡಿಸುವ ಕಾರ್ಯ ಆಗಬೇಕು ಎಂದರು. ನ್ಯಾಯವಾದಿ ಆರ್.ಕೆ.ಭಟ್ಟ ಮತದಾನದ ಮಹತ್ವದ ಕುರಿತು ಉಪನ್ಯಾಸ ನೀಡಿದರು. ಸಿವಿಲ್ ನ್ಯಾಯಾಧೀಶರಾದ ಲಕ್ಷ್ಮೀಬಾಯಿ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ ಎಂ. ಗುರುರಾಜ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು. ಯುವ ಮತದಾರರಿಗೆ ಮತದಾರರ ಗುರುತಿನ ಚೀಟಿ ವಿತರಿಸಲಾಯಿತು.
ತಾಲೂಕು ವಕೀಲರ ಸಂಘದ ಅಧ್ಯಕ್ಷೆ ಸರಸ್ವತಿ ಭಟ್ಟ, ಕಾರ್ಯದರ್ಶಿ ಗಣೇಶ ಪಾಟಣಕರ್, ಬಿಇಒ ಎನ್.ಆರ್.ಹೆಗಡೆ, ತಾ.ಪಂ ಪ್ರಭಾರಿ ಇಒ ನಾಗರಾಜ ನಾಯ್ಕ, ಅಪರ ಸರ್ಕಾರಿ ವಕೀಲ ಎನ್.ಟಿ.ಗಾಂವ್ಕರ ಇತರರಿದ್ದರು. ಶ್ರೀಧರ ಮಡಿವಾಳ ನಿರ್ವಹಿಸಿದರು.

300x250 AD
Share This
300x250 AD
300x250 AD
300x250 AD
Back to top