ಯಲ್ಲಾಪುರ: ಪಟ್ಟಣದ ರವೀಂದ್ರನಗರದಿಂದ ಯುವತಿಯೋರ್ವಳು ಕಾಣೆಯಾದ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಾಮನಟಗಿಯ ಭಾಗ್ಯಶ್ರೀ ಬಸನಗೌಡ ಪಾಟೀಲ ಕಾಣೆಯಾದ ಯುವತಿ. ಈಕೆ ಯಲ್ಲಾಪುರದ ರವೀಂದ್ರ ನಗರದ ಸಂಬಂಧಿಯ ಮನೆಯಲ್ಲಿದ್ದು, ಅಲ್ಲಿಂದ ಹೊರ ಹೋದವರು ತನ್ನ ಊರಿಗೂ ಹೋಗದೇ, ಮನೆಗೂ ಬಾರದೇ ಕಾಣೆಯಾಗಿದ್ದಾರೆ. 5.2 ಅಡಿ ಎತ್ತರ, ಗೋಧಿ ಬಣ್ಣ, ಸಾಧಾರಣ ಮೈಕಟ್ಟು, ಕೋಲು ಮುಖ, ಉದ್ದ ಕೂದಲು ಹೊಂದಿದ್ದಾರೆ. ಹಸಿರು ಬಣ್ಣದ ಟಾಪ್, ಲೆಗ್ಗಿನ್ಸ್ ಧರಿಸಿದ್ದಾರೆ. ಕನ್ನಡ ಭಾಷೆ ಮಾತನಾಡುತ್ತಾರೆ.
ಈ ಚಹರೆಯುಳ್ಳ ಯುವತಿ ಕಂಡಲ್ಲಿ ಯಲ್ಲಾಪುರದ ಸಿಪಿಐ Tel:+919480805257, ಪಿಎಸ್ಐTel:+919480805273, ಪೊಲೀಸ್ ಠಾಣೆ- Tel:+9108419261133, ನಿಸ್ತಂತು ಕೇಂದ್ರ ಕಾರವಾರ- Tel:+9108382226550 ಅವರನ್ನು ಸಂಪರ್ಕಿಸಲು ಕೋರಲಾಗಿದೆ.
ಯುವತಿ ಕಾಣೆ: ಪ್ರಕರಣ ದಾಖಲು
