ಶಿರಸಿ: ಶಿರಸಿಯ ನೆಮ್ಮದಿ ಕುಠೀರದಲ್ಲಿ ಶಿರಸಿಯ ಸಾಹಿತ್ಯ ಚಿಂತಕರ ಚಾವಡಿಯ ಆಶ್ರಯದಲ್ಲಿ ಜ.27, ಶನಿವಾರ ಮಧ್ಯಾಹ್ನ 3ಗಂಟೆಗೆ ನಿವೃತ್ತ ಕಲಾ ಶಿಕ್ಷಕ ಎಸ್.ಎಮ್.ಹೆಗಡೆಯವರ ಚೊಚ್ಚಲ ಕವಲ ಸಂಕಲನ “ಮೊಗ್ಗಿನ ಮಾಲೆ” ಲೋಕಾರ್ಪಣೆಗೊಳ್ಳಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಟಿ ವೈದ್ಯ ಮಂಜುನಾಥ ಹೆಗಡೆ ಹೂಡ್ಲಮನೆ ವಹಿಸಲಿದ್ದು, ದಿವಸ್ಪತಿ ಭಟ್ಟ ಬೆಂಗಳೂರು ಸಮಾರಂಭವನ್ನು ಉದ್ಘಾಟಿಸುವರು. ಕಥೆಗಾರ ಕೆ.ಮಹೇಶ ಕೃತಿ ಬಿಡುಗಡೆಗೊಳಿಸಿದರೆ, ಚುಟುಕು ಕವಿ ದತ್ತಗುರು ಕಂಠಿ ಕೃತಿ ಪರಿಚಯಿಸುವರು. ಮುಖ್ಯ ಅತಿಥಿಗಳಾಗಿ ನಿರ್ಮಲಾ ಹೆಗಡೆ ಸಂಪೇಗದ್ದೆ, ದಾಕ್ಷಾಯಿಣಿ ಪಿ.ಸಿ. ಮತ್ತು ಶೋಭಾ ಭಟ್ಟ, ಕೃತಿಕಾರ ಎಸ್.ಎಮ್. ಹೆಗಡೆ ಉಪಸ್ಥಿತರಿರುವರು. ಸಾಹಿತ್ಯ ಚಿಂತಕರ ಚಾವಡಿಯ ಸಂಸ್ಥಾಪಕರಾದ ಎಸ್.ಎಸ್.ಭಟ್ ಸ್ವಾಗತ ಮತ್ತು ಪ್ರಾಸ್ಥಾವಿಕವಾಗಿ ಮಾತನ್ನಾಡುವರು. ಪ್ರಾರ್ಥನಾಗೀತೆಯನ್ನು ರಾಜಲಕ್ಮಿ ಭಟ್ಟ ಬೊಮ್ಮನಳ್ಳಿ, ರೇಣುಕಾ ಬ್ಯಾಗದ್ದೆ ಪ್ರಸ್ತುತಪಡಿಸಲಿದ್ದು, ಬರಹಗಾರ್ತಿ ಭವ್ಯಾ ಹಳೆಯೂರು, ರೇವತಿ ಭಟ್ಟ ಹೊಸ್ಕೆರೆ ಕಾರ್ಯಕ್ರಮ ನಿರ್ವಹಿಸುವರು. ಈ ವೇಳೆ ಬಳಗದ ಕವಿಮಿತ್ರರಿಂದ “ಜಾನಪದ ಕವಿಗೋಷ್ಟಿ” ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.