Slide
Slide
Slide
previous arrow
next arrow

ಜ.28ಕ್ಕೆ ಮುಕ್ತ ಚದುರಂಗ ಪಂದ್ಯಾವಳಿ

300x250 AD

ಶಿರಸಿ: ಉತ್ತರ ಕನ್ನಡ ಜಿಲ್ಲಾ ಚದುರಂಗ ಸಂಘದಿಂದ ಜ.28, ಭಾನುವಾರದಂದು ಮುಂಜಾನೆ 9 ಗಂಟೆಗೆ ಮುಕ್ತ ಚದುರಂಗ ಪಂದ್ಯಾವಳಿಯನ್ನು ನಗರದ ಕಡವೆ ಶ್ರೀಪಾದ ಹೆಗಡೆ ಕಲ್ಯಾಣ ಮಂಟಪ ಆಯೋಜಿಸಲಾಗಿದೆ. ಪಂದ್ಯಾವಳಿಯು ಒಟ್ಟೂ ರೂ. 76,000/- ನಗದು ಹಾಗೂ 31 ಟ್ರೋಫಿಗಳನ್ನೊಳಗೊಂಡಿರುತ್ತದೆ. ವಯೋಮಿತಿ 16, 14, 12, 10, 8 ಹಾಗೂ ಉತ್ತಮ ಕಿರಿಯ ಆಟಗಾರ ಪ್ರಶಸ್ತಿ, ಉತ್ತಮ ಮಹಿಳಾ ಆಟಗಾರ್ತಿ ಪ್ರಸ್ತಿಗಳು, ವಯೋಮಿತಿ 45, 50, 55, 60 ವರ್ಷ ಮೇಲ್ಪಟ್ಟ ಪ್ರಶಸ್ತಿಗಳು ಹಾಗೂ ಉತ್ತಮ ಅಂಗವಿಕಲ ಪ್ರಶಸ್ತಿಗಳನ್ನೂ ಸಹ ಪಂದ್ಯಾವಳಿಯು ಒಳಗೊಂಡಿರುತ್ತದೆ. ಪ್ರವೇಶ ಶುಲ್ಕ ರೂ. 500 ಇದ್ದು, ಪಂದ್ಯಾವಳಿಯು ಫೀಡೆ ಸ್ವಸ್ ಮಾದರಿಯಲ್ಲಿ 15 ನಿಮಿಷ ಮತ್ತು 5 ಸೆಕೆಂಡ್ ಪ್ರತಿ ನಡೆಗೆ ಹೆಚ್ಚುವರಿ ಸೇರ್ಪಡೆಯಾಗಿ ಜರುಗಲಿದೆ. ಆಸಕ್ತ ಚದುರಂಗ ಆಟಗಾರರು ದಿನಾಂಕ : 27/01/2024 ರೊಳಗಾಗಿ ತಮ್ಮ ಹೆಸರನ್ನು ನೊಂದಾಯಿಸುವುದು ಕಡ್ಡಾಯವಾಗಿದೆ. ಆಟಗಾರರು ತಮ್ಮ ನೊಂದಣಿಯನ್ನು ನವೀನ ಶ್ರೀ. ಹೆಗಡೆ ವಾಟ್ಸ್ ಆಪ್ ನಂ. tel:+919480621062 ಕ್ಕೆ ಜಿ-ಪೇ ಅಥವಾ ಫೋನ ಪೇ ಮುಖಾಂತರ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ನವೀನ ಹೆಗಡೆ ಅಥವಾ ರವಿ ಹೆಗಡೆ ಮೊ : tel:+918073230690ಇವರನ್ನು ಸಂಪರ್ಕಿಸಬಹುದಾಗಿದೆ.

300x250 AD
Share This
300x250 AD
300x250 AD
300x250 AD
Back to top