ಕಾರವಾರ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನರೇಗಾ ಕೂಲಿಕಾರರ ಮಕ್ಕಳ ಆರೈಕೆಗಾಗಿ ನಿರ್ಮಿಸಲಾದ “ಶಿಶುಪಾಲನಾ ಕೇಂದ್ರ”ಕ್ಕೆ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಕೆ. ಶೆಟ್ಟಿ ಮಂಗಳವಾರ ಚಾಲನೆ ನೀಡಿದರು.
ತಾಲೂಕಿನ ಹೊಲನಗದ್ದೆ ಗ್ರಾಮ ಪಂಚಾಯತ್ನ ಕಡ್ಲೆ ಗ್ರಾಮದಲ್ಲಿ ಕೂಸಿನ ಮನೆ ಉದ್ಘಾಟಿಸಿ ಮಾತನಾಡಿದ ಅವರು ಇಂತಹ ಸರ್ಕಾರದ ಯೋಜನೆಗಳ ಸದುಪಯೋಗದಲ್ಲಿ ತಾಯಂದಿರ ಪಾತ್ರ ಬಹುಮುಖ್ಯ, ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹರಸಿದರು.ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ(ಅಭಿವೃದ್ಧಿ) ಎನ್.ಜಿ.ನಾಯ್ಕ ಹಾಗೂ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಆರ್.ಎಲ್.ಭಟ್ ಕೂಸಿನ ಮನೆಯ ಕಾರ್ಯ ವೈಖರಿಯನ್ನು ಶಾಸಕರಿಗೆ ಸಂಕ್ಷಿಪ್ತವಾಗಿ ವಿವರಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಎಮ್.ಎಮ್ ಹೆಗಡೆ ಹಾಗೂ ಉಪಾಧ್ಯಕ್ಷ ಮಹಾಂತೇಶ ಹರಕಂತ್ರ ಹಾಗೂ ಸದಸ್ಯರು, ಸಿಡಿಪಿಒ ನಾಗರತ್ನ ನಾಯಕ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗರಾಜ್ ನಾಯ್ಕ, ಹಾಗೂ ಸಿಬ್ಬಂದಿಗಳು, ಐಇಸಿ ಸಂಯೋಜಕರು, ತಾಂತ್ರಿಕ ಸಹಾಯಕರು ಇದ್ದರು.