Slide
Slide
Slide
previous arrow
next arrow

ಚುನಾವಣಾ ಆಯೋಗದ ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆ

300x250 AD

ಕಾರವಾರ: ರಾಜ್ಯ ಚುನಾವಣಾ ಆಯೋಗದಿಂದ ರಾಷ್ಟ್ರೀಯ ಮತದಾರರ ದಿನ-2024 ರ ಪ್ರಯುಕ್ತ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್‌ ನೋಡಲ್‌ ಅಧಿಕಾರಿಗಳ ವಿಭಾಗದಲ್ಲಿ ರಾಜ್ಯಮಟ್ಟದ ಪ್ರಶಸ್ತಿಗೆ , ಪ್ರಪ್ರಥಮವಾಗಿ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ ಕಾಂದೂ ಆಯ್ಕೆಯಾಗಿದ್ದಾರೆ.

ಜಿಲ್ಲೆಯಲ್ಲಿ ವಿನೂತನವಾಗಿ ಸ್ವೀಪ್‌ ಕಾರ್ಯಕ್ರಮಗಳಾದ ಬೋಟ್‌ Rally, ಬೈಕ್‌ Rally, ವಿಶೇಷಚೇತನರ ಬೈಕ್‌ Rally, ಯುವ ಸಂವಾದ, ಸ್ಕೂಬಾ ಡೈವಿಂಗ್‌, ರಿವರ್‌ ರಾಫ್ಟಿಂಗ, ಹಿರಿಯ ನಾಗರಿಕರ ಆರೋಗ್ಯ ತಪಾಸಣೆ, ಮಾದರಿ ಮತಗಟ್ಟೆಗಳು ಹಾಗೂ ಫಲಪುಷ್ಪ ಪ್ರದರ್ಶನಗಳಂತಹ ವಿವಿಧ ವಿನೂತನ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಜಿಲ್ಲೆಯಲ್ಲಿ ಯುವ ಮತದಾರರು, ಹಿರಿಯ ನಾಗರಿಕರು, ಸಾಗರೋತ್ತರ ಮತದಾರರನ್ನು ಆಕರ್ಷಿಸಿ ಮತದಾನದಲ್ಲಿ ಭಾಗವಹಿಸಿ ಹೆಚ್ಚು ಮತದಾನವಾಗಲು ಶ್ರಮಿಸಿದ ಉತ್ತರ ಕನ್ನಡ ಜಿಲ್ಲಾ ಪಂಚಾಯತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

300x250 AD
Share This
300x250 AD
300x250 AD
300x250 AD
Back to top