ದಾಂಡೇಲಿ: ದಾಂಡೇಲಿಯ ಬಸ್ ನಿಲ್ದಾಣದ ಮಹಿಳೆಯರ ವಿಶ್ರಾಂತಿ ಕೊಠಡಿಯ ಒಳಗಡೆ ಗೋಡೆಯಲ್ಲಿ ಅಸಭ್ಯ ನಡವಳಿಕೆಯ ಪ್ರೇಮ ಬರಹಗಳು ಹಾಗೂ ಚಿತ್ರಗಳು ಕಂಡುಬಂದಿದೆ. ಈ ಕೊಠಡಿಯ ಒಳಗಡೆ ಪುರುಷರಿಗೆ ಪ್ರವೇಶವಿಲ್ಲವಾದ್ದರಿಂದ ಈ ರೀತಿಯ ಅಸಭ್ಯ ಬರಹಗಳನ್ನು ಯಾರು ಬರೆದಿರಬಹುದು, ಗೀಚಿರಬಹುದೆಂಬ ಮಾಧ್ಯಮದವರ ಪ್ರಶ್ನೆಗೆ ಯುವತಿಯರೇ ಈ ಕೃತ್ಯವನ್ನು ಮಾಡಿದ್ದಾರೆ ಎನ್ನುವ ವಾಸ್ತವಾಂಶ ಬೆಳಕಿಗೆ ಬಂದಿದೆ. ಈ ರೀತಿಯ ವಿಲಕ್ಷಣ ಬರಹಗಳನ್ನು ಬರೆಯುವುದನ್ನು ನಿಲ್ಲಿಸಬೇಕು, ಇಂತಹ ಕೆಲಸ ಕೈಗೊಂಡವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು ತಿಳಿಸಿದ್ದಾರೆ.