Slide
Slide
Slide
previous arrow
next arrow

ಸಿ.ವಿ.ಎಸ್.ಕೆ ಪ್ರೌಢಶಾಲೆಯಲ್ಲಿ ‘ಶ್ರೀ ರಾಮೋತ್ಸವ’: ಸರಸ್ವತಿ ಪ್ರತಿಮೆಯ ಅನಾವರಣ

300x250 AD

ಕುಮಟಾ: ಕುಮಟಾದ ಕೊಂಕಣ ಎಜ್ಯುಕೇಶನ ಟ್ರಸ್ಟ್ನ ಸಿ.ವಿ.ಎಸ್.ಕೆ ಪ್ರೌಢಶಾಲೆಯಲ್ಲಿ ‘ಶ್ರೀ ರಾಮೋತ್ಸವ’ ಕಾರ್ಯಕ್ರಮ ನಡೆಯಿತು. ಶ್ರೀ ರಾಮಮಂದಿರ ಲೋಕಾರ್ಪಣೆ ಹಾಗೂ ಶ್ರೀ ಬಾಲರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಶುಭ ದಿನದಂದು, ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ, ಶ್ರೀ ರಾಮೋತ್ಸವ ಕಾರ್ಯಕ್ರಮಕ್ಕೆ ಕೊಂಕಣ ಎಜ್ಯುಕೇಶನ ಟ್ರಸ್ಟಿನ ಅಧ್ಯಕ್ಷರಾದ ವಿಠ್ಠಲ ಆರ್. ನಾಯಕ, ಕಾರ್ಯದರ್ಶಿ ಮುರಳೀಧರ ಪ್ರಭು, ಜಂಟಿ ಕಾರ್ಯದರ್ಶಿಗಳಾದ ಶೇಷಗಿರಿ ಶಾನಭಾಗ, ಸಂಸ್ಥೆಯ ವಿಶ್ವಸ್ಥರುಗಳಾದ ರಮೇಶ ಪ್ರಭು, ರಾಮಕೃಷ್ಣ ಗೋಳಿ, ದಾಸ ಶಾನಭಾಗ, ಅಶೋಕ ಪ್ರಭು, ಗಜಾನನ ಕಿಣಿ, ಅದೇ ರೀತಿ ಶೈಕ್ಷಣಿಕ ಸಲಹೆಗಾರರಾದ ಆರ್.ಎಚ್. ದೇಶಭಂಡಾರಿ, ವಿಧಾತ್ರಿ ಅಕಾಡೆಮಿಯ ಗುರುರಾಜ ಶೆಟ್ಟಿ, ಪ್ರಾಚಾರ್ಯರಾದ ಕಿರಣ ಭಟ್ಟ, ಮುಖ್ಯಾಧ್ಯಾಪಕರಾದ ಶ್ರೀಮತಿ ಸುಮಾ ಪ್ರಭು, ಶ್ರೀಮತಿ ಸುಜಾತಾ ನಾಯ್ಕ, ಶ್ರೀಮತಿ ಸಾವಿತ್ರಿ ಹೆಗಡೆ ಉಪಸ್ಥಿತರಿದ್ದು ಶ್ರೀ ರಾಮೋತ್ಸವದ ಜ್ಯೋತಿಯನ್ನು ಬೆಳಗಿಸಿ, ಶ್ರೀ ರಾಮನಿಗೆ ಪುಷ್ಪಾರ್ಚನೆಯನ್ನು ಸಲ್ಲಿಸಿದರು.

ಇದೇ ಶುಭ ಸಂದರ್ಭದಲ್ಲಿ ಮಹನೀಯರ ಸಮ್ಮುಖದಲ್ಲಿ ಸಿ.ವಿ.ಎಸ್.ಕೆ ಪ್ರೌಢಶಾಲೆಯ ಆವರಣದಲ್ಲಿ ಸರಸ್ವತಿ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು. ವಿದ್ಯಾರ್ಥಿಗಳು ರಾಮಗಾನ, ಶ್ರೀ ರಾಮರಕ್ಷಾ ಸ್ತೋತ್ರ, ಶ್ರೀ ಹನುಮಾನ ಚಾಲೀಸ, ರಾಮ ಭಜನಗಳನ್ನು ಪಠಿಸಿ, ಶ್ರೀ ರಾಮನ ಕೃಪೆಗೆ ಪಾತ್ರರಾದರು. ನಂತರದಲ್ಲಿ ಶಿಕ್ಷಕರಾದ ಶಿವಾನಂದ ಭಟ್ಟ ಶ್ರೀರಾಮನ ಮತ್ತು ಅಯೋಧ್ಯೆಯ ರಕ್ತಸಿಕ್ತ ಇತಿಹಾಸ, ಕರ್ನಾಟಕ ಹಾಗೂ ಅಯೋಧ್ಯೆಯ ನಡುವಿನ ಅವಿನಾಭಾವ ಸಂಬಂಧಗಳನ್ನು ಎಳೆಎಳೆಯಾಗಿ ಹೇಳುವ ಮೂಲಕ ‘ರಾಮ ದೇಶದ ಆತ್ಮ; ರಾಮೋತ್ಸವವನ್ನು ರಾಷ್ಟ್ರೋತ್ಸವವೆಂದು ಬಣ್ಣಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಶ್ರೀ ಬಾಲರಾಮನ ವಿಗ್ರಹ ಪ್ರಾಣ-ಪ್ರತಿಷ್ಠಾಪನಾ ಕಾರ್ಯಕ್ರಮದ ನೇರಪ್ರಸಾರವನ್ನು ದೊಡ್ಡ ಚಿತ್ರಪಟದ ಮೂಲಕ ವೀಕ್ಷಿಸಲು ಅನುವು ಮಾಡಿಕೊಡಲಾಗಿತ್ತು. ವಿದ್ಯಾರ್ಥಿಗಳು ಅದನ್ನು ಕಣ್ತುಂಬಿಕೊಂಡರು. ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಶ‍್ರೀ ಸೀತಾರಾಮ, ಲಕ್ಮಣರ ಹಾಗೂ ಹನುಮಂತನ ಪಾತ್ರಗಳು ಕಾರ್ಯಕ್ರಮಕ್ಕೆ ಮೆರಗು ತಂದಿತು. ಅದೇ ರೀತಿಯಾಗಿ ಶಾಲೆಯ ಚಿತ್ರಕಲಾ ಶಿಕ್ಷಕರಾದ ಶ್ರೀ ರಾಮನಾಥ ಕೇಲಸ್ಕರ ಅವರು ಸಿದ್ಧಪಡಿಸಿದ ಶ್ರೀರಾಮ ಮಂದಿರದ ಮಾದರಿಯು ಎಲ್ಲರಿಂದ ಪ್ರಶಂಸಿಸಲ್ಪಟ್ಟಿತು. ಶಿಕ್ಷಕರಾದ ಆದರ್ಶ ರೇವಣಕರ ಹಾಗೂ ಶಿಕ್ಷಕಿ ಶ್ರೀಮತಿ ವಿನಯಾ ನಾಯಕ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳೆಲ್ಲರೂ ಭಕ್ತಿಯಿಂದ ‘ಜೈ ಶ್ರೀರಾಮ’ ಘೋಷಣೆ ಮೊಳಗಿಸುವುದರೊಂದಿಗೆ ರಾಮೋತ್ಸವವನ್ನು ಸಂಪೂರ್ಣಗೊಳಿಸಿದರು.

300x250 AD
Share This
300x250 AD
300x250 AD
300x250 AD
Back to top