ಹೊನ್ನಾವರ: ತಾಲೂಕಿನ ಕಾಸರಕೋಡ ಶ್ರೀವೀರ ಮಾರುತಿ ದೇವಸ್ಥಾನದಲ್ಲಿ ಅಯೋಧ್ಯೆಯಲ್ಲಿ ನಡೆದ ಶ್ರೀರಾಮಚಂದ್ರರ ಪ್ರಾಣ ಪ್ರತಿಷ್ಠಾಪನೆಯ ನಿಮಿತ್ತ ಧಾರ್ಮಿಕ ಕಾರ್ಯಕ್ರಮ ನಡೆಯಿತು.
ಮುಂಜಾನೆಯಿಂದ ಆರಂಭವಾದ ಕಾರ್ಯಕ್ರಮ ಮಧ್ಯಾಹ್ನ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಾಡಿನ ಪ್ರಜೆಗಳಿಗೆ ಒಳಿತಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು. ನಂತರ ಸಂಜೆ ಸರಿಯಾಗಿ 5 ಗಂಟೆಯಿಂದ ಆರಂಭವಾದ ದೀಪೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ದೀಪಜ್ಯೋತಿ ಬೆಳಗಿಸಿ ದೇವರ ಪ್ರಸಾದ ಸ್ವೀಕರಿಸಿದರು. ತದನಂತರ ಶ್ರೀ ಅರಮದೇವ ಸ್ಪೋರ್ಟ್ ಕ್ಲಬ್ ಇವರ ವತಿಯಿಂದ ಧಾರ್ಮಿಕ ಭಕ್ತಿ ನೃತ್ಯ ಗಾಯನ ಕಾರ್ಯಕ್ರಮವನ್ನು ಹೊನ್ನಾವರದ ಹೆಮ್ಮೆಯ ತಂಡವಾದ ಒಶಿಯನ್ ಹಾರ್ಟ್ ಬ್ರೇಕರ್ಸ್ ತಂಡ ನಡೆಸಿಕೊಟ್ಟಿತು. ರಾಮ ತಾರಕ ಮಂತ್ರವನ್ನು ಸೇರಿದ ಸಾವಿರಾರು ಭಕ್ತರು ಜಪಿಸಿದರು. ಭಕ್ತಿ ಗೀತಾ ಗಾಯನದಲ್ಲಿ ರಮೇಶ್ ಮೇಸ್ತ, ಪ್ರದೀಪ್ ಮುರುಡೇಶ್ವರ, ಪ್ರಥಮ್ ಮೇಸ್ತ, ರಾಜು ಮೇಸ್ತ ಅದ್ಬುತ ಗಾಯನ ಪ್ರಸ್ತುತಪಡಿಸಿದರು.ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಾಬಣ್ಣ ಅಯೋಧ್ಯ ಇತಿಹಾಸವನ್ನು ತಮ್ಮ ಪ್ರಖರ ನುಡಿಗಳ ಮೂಲಕ ಪ್ರಸ್ತುತಪಡಿಸಿದರು.ಕಾರ್ಯಕ್ರಮವನ್ನು ನಿರೂಪಕ ಜಗದೀಶ್ ಗೌಡ ನಿರೂಪಿಸಿದರು.