Slide
Slide
Slide
previous arrow
next arrow

ರಾಮನಗುಳಿಯಲ್ಲಿ ಶ್ರೀರಾಮೋತ್ಸವ ಕಾರ್ಯಕ್ರಮ

300x250 AD

ಅಂಕೋಲಾ: ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾ ಕಾರ್ಯಕ್ರಮದ ಪ್ರಯುಕ್ತ ತಾಲೂಕಿನ ರಾಮನಗುಳಿಯ ಶ್ರೀ ರಾಮಪಾದುಕಾ ದೇವಸ್ಥಾನದಲ್ಲಿ ಶ್ರೀರಾಮೋತ್ಸವ ಕಾರ್ಯಕ್ರಮವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಬೆಳಿಗ್ಗೆ ರಾಮತಾರಕ ಹವನ ಹಾಗೂ ದೇವರ ವಿವಿಧ ಪೂಜಾ ಕಾರ್ಯಕ್ರಮಗಳು, ಪ್ರಾರ್ಥನೆ ನಡೆದವು. ಶ್ರೀರಾಮಪಾದುಕಾ ದೇವರಿಗೆ ವಿಶೇಷ ಹೂವಿನ ಅಲಂಕಾರವನ್ನು ಮಾಡಲಾಗಿತ್ತು. ಬೆಳಿಗ್ಗೆ 108 ರಾಮತಾರಕ ಜಪ, ಹನುಮಾನ್ ಚಾಲೀಸಾ, ರಾಮರಕ್ಷಾಸ್ತೋತ್ರ, ರಘುಪತಿ ರಾಘವ ಭಜನೆಯನ್ನು ಮಾಡಲಾಯಿತು. ಎಲ್.ಇ.ಡಿ ಪರದೆಯಲ್ಲಿ ಅಯೋಧ್ಯೆಯಲ್ಲಿ ನಡೆಯುವ ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ನೇರಪ್ರಸಾರ, ವಿಶ್ವ ಹಿಂದು ಪರಿಷತ್ ನ ಮುಖ್ಯಸ್ಥ ರಾಮಮಂದಿರದ ಉಸ್ತುವಾರಿ ಗೋಪಾಲ್ ನಾಗರಕಟ್ಟೆ ಅವರು ಮಂದಿರದ ಕುರಿತು ನೀಡಿದ ಮಾಹಿತಿಯನ್ನು ಪ್ರಸಾರ ಮಾಡುವ ವ್ಯವಸ್ಥೆಯನ್ನು ಮಾಡಲಾಗಿತ್ತು. ಆಗಮಿಸಿದ ಎಲ್ಲ ಭಕ್ತಾಧಿಗಳಿಗೂ ಅನ್ನಪ್ರಸಾದ ವಿತರಣೆಯನ್ನು ಮಾಡಲಾಯಿತು. ಸಂಜೆ ಭಜನೆ, ಕೀರ್ತನೆ, ದೀಪೋತ್ಸವದ ಮೂಲಕ ರಾಮನ ಆಗಮನವನ್ನು ಅದ್ಧೂರಿಯಾಗಿ ಆಚರಿಸಲಾಯಿತು.

300x250 AD
Share This
300x250 AD
300x250 AD
300x250 AD
Back to top