ಜೊಯಿಡಾ: ತಾಲೂಕಿನಾದ್ಯಂತ ಸೋಮವಾರ ರಾಮನಾಮ ಜಪದಿಂದ ಸಾರ್ವಜನಿಕರು ಸಂಕೀರ್ತನ ನಡೆಸಿ ಸಂತೃಪ್ತರಾದರು ಎಲ್ಲಿ ನೋಡಿದರೂ ಜೈ ಶ್ರೀರಾಮ , ಜೈ ಶ್ರೀರಾಮ ಎಂಬ ಘೋಷಣೆ ಮೊಳಗಿಸಿ ಅಯೋಧ್ಯೆಯಲ್ಲಿ ನಡೆದ ಪ್ರಾಣ ಪ್ರತಿಷ್ಠಾಪನೆಯನ್ನು ಕಣ್ತುಂಬಿಕೊಂಡರು.
ತಾಲೂಕಿನ ಜೊಯಿಡಾ ರಾಮನಗರ , ಸಿಂಗರಗಾಂವ್ , ಗುಂದ ಕಾಸಲ್ ರಾಕ್ ಸೇರಿದಂತೆ ಪ್ರತಿ ಗ್ರಾಮಗಳು ಶೃಂಗಾರಗೊಂಡು ಶ್ರೀರಾಮನ ಮಂದಿರ ಪುನರ್ನಿರ್ಮಾಣದ ಖುಷಿಯನ್ನು ಸಿಹಿಯೊಂದಿಗೆ ಹಂಚಿಕೊಂಡರು. ಎಲ್ಲಾ ದೇವಾಲಯಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರು , ಸಂಘ ಸಂಸ್ಥೆಯವರು ಕಾರ್ಯಕ್ರಮ ಸಂಘಟಿಸಿ ಭಕ್ತಾದಿಗಳಿಗೆ ಪಾನಕ , ಪಾಯಸ , ತಿಂಡಿಗಳನ್ನು ನೀಡಿ ಭಕ್ತಿಭಾವ ಮೆರೆದರು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು. ಬೆಳ್ಳಂ ಬೆಳಿಗ್ಗೆಯಿಂದಲೇ ದೇವಾಲಯ , ಪೂಜೆ ಜಪ ತಪಗಳಿಂದ ಪುರೋಹಿತರಾದಿಯಾಗಿ ಸಮಸ್ತ ಜನತೆ ಭಕ್ತಿಯಿಂದ ಇದೆ ಅಯೋಧ್ಯೆ ಎಂಬ ಭಾವದಲ್ಲಿ ಭಕ್ತಿಯಿಂದ ಮಿಂದೆದ್ದರು. ಶಾಲೆ , ಕಾಲೇಜ್ , ಕಚೇರಿಗಳಲ್ಲಿ ಜನರ ಅಭಾವ ಕಂಡು ಬಂದಿತು.