ಶಿರಸಿ: ಅಯೋಧ್ಯ ಶ್ರೀ ರಾಮ ಮಂದಿರ ಜ.೨೨ರಂದು ಲೋಕಾರ್ಪಣೆಗೊಳ್ಳುತ್ತಿದ್ದು ಈ ಕಾರ್ಯಕ್ರಮದ ಅಂಗವಾಗಿ ಜ.20ರಂದು ನಗರ ಠಾಣೆಯ ಗಣಪತಿ ಭವನದಲ್ಲಿ ಶಾಂತಿಪಾಲನಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು, ಶಿರಸಿ ನಗರ ಠಾಣಾ ವ್ಯಾಪ್ತಿಯಲ್ಲಿ ಜರುಗುವ ಧಾರ್ಮಿಕ ಕಾರ್ಯಕ್ರಮ ನಿಮಿತ್ತ ಎಲ್ಲಾ ಸಮುದಾಯದ ಮುಖಂಡರನ್ನು ಕರೆಯಿಸಿ ಸಭೆಮಾಡಿ ಸೂಕ್ತ ತಿಳುವಳಿಕೆ ನೀಡಲಾಯಿತು, ಸಭೆಯನ್ನು ಡಿಎಸ್ಪಿ ಗಣೇಶ ಕೆ.ಎಲ್ ಮಾರ್ಗದರ್ಶನದಲ್ಲಿ ಸಿಪಿಐ ರಾಮಚಂದ್ರ ನಾಯಕ,ಪಿಎಸೈ ನಾಗಪ್ಪ ಬಿ ಹಾಗೂ ಎಲ್ಲಾ ಧಾರ್ಮಿಕ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.