ದಾಂಡೇಲಿ : ನಗರದ ಆಜಾದ್ ನಗರ ಮತ್ತು ವಿಜಯನಗರದಲ್ಲಿ ಮನೆ ಮನೆಗೆ ತೆರಳಿ, ಅಯೋಧ್ಯೆಯ ಶ್ರೀರಾಮ ಮಂದಿರದ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಆಮಂತ್ರಣ ಪತ್ರಿಕೆ ಮತ್ತು ಮಂತ್ರಾಕ್ಷತೆಯನ್ನು ಶನಿವಾರ ವಿತರಿಸಲಾಯಿತು. ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆಯ ದಿನ ಹಿಂದೂ ಧರ್ಮ ಬಾಂಧವರು ಅನುಸರಿಸಬೇಕಾದ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಅಭಿಯಾನ ಪ್ರಮುಖರಾದ ಸುಧಾಕರ ರೆಡ್ಡಿ , ಅಭಿಯಾನ ಸಹ ಪ್ರಮುಖರಾದ ನಾಗರಾಜ್ ಅನಂತಪುರ ಮತ್ತು ನಗರ ಸಂಪರ್ಕ ಪ್ರಮುಖರಾದ ವಿನಯ್ ಹುಕ್ಕೇರಿ, ಸಂತೋಷ ಅಣ್ವೇಕರ್, ವಿರಸಂಗಯ್ಯ ಕುಲಕರ್ಣಿ, ಚಂದ್ರು ಮಾಳಿ, ದೇವಸ್ಥಾನ ಪ್ರಮುಖರಾದ ಬುದ್ಧಿವಂತಗೌಡಾ ಪಾಟೀಲ, ವೆಂಕಟೇಶ ಪಾಂಡೆ ಮತ್ತು ಸಾಹಿತ್ಯ ಪ್ರಮುಖರಾದ ಲಿಂಗಯ್ಯಾ ಪೂಜಾರ, ವಿನಯ ದಳವಾಯಿ, ಸಂಜೀವ ನಿಂಬಾಳಕರ, ಪರಿವಾರದ ಕಾರ್ಯಕರ್ತರು ಉಪಸ್ಥಿತರಿದ್ದರು.