Slide
Slide
Slide
previous arrow
next arrow

ಮಹಿಂದ್ರ ಅಂಡ್ ಮಹಿಂದ್ರ ಕಂಪನಿ ಸಿ.ಎಸ್.ಆರ್ ಯೋಜನೆಯಡಿ ವಿದ್ಯಾರ್ಥಿ ವೇತನ ವಿತರಣೆ

300x250 AD

ಹಳಿಯಾಳ: ದೇಶಪಾಂಡೆ ಐಟಿಐ ಕಾಲೇಜಿನಲ್ಲಿ ತರಬೇತಿ ಪಡೆಯುತ್ತಿರುವ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಹಿಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ಒಬ್ಬ ವಿದ್ಯಾರ್ಥಿಗೆ ತಲಾ ರೂ. 10,000/- ದಂತೆ ಒಟ್ಟು 50 ವಿದ್ಯಾರ್ಥಿಗಳಿಗೆ ಒಟ್ಟು 5 ಲಕ್ಷ ರೂ ಮೊತ್ತದ ಚೆಕ್ಕನ್ನು ಪಾಲಕರ ಸಮ್ಮುಖದಲ್ಲಿ ಶನಿವಾರ ಕಾಲೇಜಿನಲ್ಲಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ದಿನೇಶ್.ಆರ್.ನಾಯ್ಕ ಅವರು ವಿದ್ಯಾರ್ಥಿ ಜೀವನ ಬದುಕಿನ ಪ್ರಮುಖ ಘಟ್ಟಗಳಲ್ಲಿ ಒಂದು. ಈ ಹಂತದಲ್ಲಿ ಕಲಿಕೆಗೆ ನೆರವಾಗುವ ವಿದ್ಯಾರ್ಥಿವೇತನ ನಮ್ಮ ಜೀವನವನ್ನೇ ಬದಲಿಸಬಹುದು. ಈ ವಿದ್ಯಾರ್ಥಿ ವೇತನವನ್ನು ಸದುಪಯೋಗಪಡಿಸಿಕೊಂಡು ಕಠಿಣ ಪರಿಶ್ರಮದೊಂದಿಗೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿ ವೇತನವನ್ನು ದೊರಕಿಸಿಕೊಡುವಲ್ಲಿ ಕಾರಣಿಕರ್ತರಾದ ಶ್ರೀ.ವಿ ಆರ್ ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ನ ಅಧ್ಯಕ್ಷರು ಹಾಗೂ ಹೆಚ್ಚಿನ ಶ್ರಮವಹಿಸಿದ ಟ್ರಸ್ಟ್ ಆಡಳಿತಾಧಿಕಾರಿಯವರಿಗೆ ಕೃತಜ್ಞತೆ ಸಲ್ಲಿಸಲಾಯಿತು. ಕಾರ್ಯಕ್ರಮವನ್ನು ಕಿರಿಯ ತರಬೇತಿ ಅಧಿಕಾರಿಗಳಾದ ಶ್ರೀದಾಸ್ ಕೊಲೆಕರ್, ರಾಜೇಶ್ ದಬಾಲಿ ಸಂಘಟಿಸಿದರು.

300x250 AD
Share This
300x250 AD
300x250 AD
300x250 AD
Back to top