ಜೋಯಿಡಾ: ಜೋಯಿಡಾ ತಾಲೂಕಿನ ಕ್ಯಾಸಲರಾಕ್ ನಲ್ಲಿ ಜ.22ರಂದು ಅಯೋಧ್ಯಾದಲ್ಲಿ ಪ್ರತಿಷ್ಠಾನ ವಾಗಲಿರುವ ರಾಮ ಮಂದಿರದ ಉದ್ಘಾಟನೆಗಾಗಿ ಕ್ಯಾಸಲರಾಕ್’ನಲ್ಲಿ ಭರ್ಜರಿ ತಯಾರಿ ನಡೆದಿದೆ. ಜೋಯಿಡಾ ತಾಲೂಕಿನ ಬಿಜೆಪಿ ತಾಲೂಕಾ ಅಧ್ಯಕ್ಷ ಸಂತೋಷ ರೆಡ್ಕರ ಮಾತನಾಡಿ ಪ್ರತಿಯೊಬ್ಬ ಹಿಂದೂಗಳಿಗೆ ರಾಮ ಮಂದಿರ ಪ್ರತಿಷ್ಠಾನವಾಗುತ್ತಿರುವುದು ಹೆಮ್ಮೆಯ ಸಂಗತಿ , ಎಲ್ಲಾ ಹಿಂದೂಗಳು 22 ರಂದು ರಾಮನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಶ್ರೀ ರಾಮನ ಪೂಜೆ ನಾವೆಲ್ಲರು ಸೇರಿ ಮಾಡೋಣ ಜೋಯಿಡಾ ತಾಲೂಕಿನ ಸಮಸ್ತ ಹಿಂದೂ ಬಾಂಧವರು ರಾಮ ಮಂದಿರ ಸ್ಥಾಪನೆಗೆ ಕೈಜೋಡಿಸಿ ಎಂದರು.
ಕಳೆದ 5 ದಿನಗಳಿಂದ ಕ್ಯಾಸಲ್ ರಾಕ್ ಭಾಗದ ಜನರು ಮೆರವಣಿಗೆ ಮೂಲಕ ಭಜನೆ ಮಾಡುತ್ತ ಹನುಮಾನ ಮಂದಿರದಲ್ಲಿ ವಿಶೇಷ ಪೂಜೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಕ್ಯಾಸಲರಾಕ್ ಭಾಗದ ಸಮಸ್ತ ನಾಗರಿಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.