ಶಿರಸಿ: ಶ್ರೀರಾಮನ ಪ್ರಾಣ ಪ್ರತಿಷ್ಠೆ ಪ್ರಯುಕ್ತ ಜ.22, ಸೋಮವಾರದಂದು ತಾಲೂಕಿನ ಮಂಜುಗುಣಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಮಧ್ಯಾಹ್ನ 11.45ಕ್ಕೆ ನಿತ್ಯ ಪೂಜೆಯ ನಂತರ, ಶ್ರೀದೇವರ ಉತ್ಸವ ಮೂರ್ತಿಗೆ ರಾಮನ ಪ್ರಾಣ ಪ್ರತಿಷ್ಠೆಯ ವೇಳೆಯಲ್ಲಿ ಡೋಲೊತ್ಸವ (ತೂಗು ಉಯ್ಯಾಲೆ ಉತ್ಸವ) ಜರುಗಲಿದ್ದು, ಭಕ್ತರು ಈ ವೇಳೆಯಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗಲು ಪ್ರಕಟಣೆಯಲ್ಲಿ ಕೋರಲಾಗಿದೆ.