ಹಳಿಯಾಳ : ಪಟ್ಟಣದ ಪುರಸಭೆ ವ್ಯಾಪ್ತಿಯ ಆಶ್ರಯ ಸಮಿತಿಗೆ ನಾಮನಿರ್ದೇಶಿತ ಅಧಿಕಾರೇತರ ಸದಸ್ಯರಾಗಿ ಕಾಂಗ್ರೆಸ್ ಯುವ ಮುಖಂಡರಾದ ಅಣ್ಣಪ್ಪ ವಡ್ಡರ ಅವರನ್ನು ನೇಮಕ ಮಾಡಲಾಗಿದೆ. ವಸತಿ ಇಲಾಖೆಯ ಅಧೀನ ಕಾರ್ಯದರ್ಶಿ ಷಾಹೀನ್ ಪರ್ವೀನ್.ಕೆ ಅವರು ಈ ನೇಮಕಾತಿ ಆದೇಶವನ್ನು ಹೊರಡಿಸಿದ್ದಾರೆ. ಆಶ್ರಯ ಸಮಿತಿಯ ಸದಸ್ಯರಾಗಿ ಬಡವರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಸೇವೆಯನ್ನು ಸಲ್ಲಿಸುವಂತೆ ಶಾಸಕರಾದ ಆರ್.ವಿ.ದೇಶಪಾಂಡೆ ಅಣ್ಣಪ್ಪಾ ವಡ್ಡರ ಅವರಿಗೆ ಶುಭವನ್ನು ಹಾರೈಸಿದ್ದಾರೆ