ಹೊನ್ನಾವರ: ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಆಟೋಗಳಿಗೆ ರಾಮಧ್ವಜ ವಿತರಣೆ ಜರುಗಿತು. ಪಟ್ಟಣದ ಶನಿಶ್ವರ ದೇವಾಲಯದಲ್ಲಿ ಆಟೋ ಯೂನಿಯನ್ ಅಧ್ಯಕ್ಷ ಶಿವರಾಜ ಮೇಸ್ತ ತಮ್ಮ ಸಂಘದ ಸದಸ್ಯರೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ನಂತರ ಸಾಂಕೇತಿಕವಾಗಿ ಧ್ವಜ ವಿತರಣೆ ಜರುಗಿತು. ಶುಕ್ರವಾರ ಸಾಯಂಕಾಲದೊಳಗೆ ಪಟ್ಟಣದ ಮೂನ್ನೂರು ಆಟೋಗಳಿಗೆ ವಿತರಣೆಯಾಗಲಿದ್ದು, ಶನಿವಾರದಿಂದ ಆಟೋಗಳಲ್ಲಿ ಧ್ವಜ ಇರಲಿದೆ ಎಂದರು.
ಆಟೋ ಯೂನಿಯನ್ ಅಧ್ಯಕ್ಷ ಶಿವರಾಜ ಮೇಸ್ತ ಮಾತನಾಡಿ, ಜ.22ರಂದು ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರವು ಲೋಕಾರ್ಪಣೆಯಾಗಲಿದೆ. ಎಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ರಿಕ್ಷಾ ಚಾಲಕರು ತಮ್ಮ ಆಟೋ ಮೇಲೆ ಧ್ವಜ ಅಳವಡಿಸಿ ಹಬ್ಬವನ್ನು ಇಮ್ಮಡಿಗೊಳಿಸಲಿದ್ದಾರೆ. ಹೊನ್ನಾವರ ತಾಲೂಕಿನೆಲ್ಲಡೆ ಆ ದಿನ ನಡೆಯುವ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ರಿಕ್ಷಾ ಚಾಲಕರು ಭಾಗವಹಿಸಲಿದ್ದಾರೆ ಎಂದರು. ಹಿರಿಯ ಪತ್ರಕರ್ತರಾದ ಜಿ.ಯು.ಭಟ್ ಮಾತನಾಡಿ ಅಯೊಧ್ಯೆಯಲ್ಲಿ ಬಾಲ ಶ್ರೀ ರಾಮಮಂದಿರ ಪ್ರತಿಷ್ಟಾಪನೆಗೆ ದೇಶವೇ ಸಂಭ್ರಮಿಸುವಾಗ ಹೊನ್ನಾವರ ರಿಕ್ಷಾ ಯೂನಿಯನ್ ಅಧ್ಯಕ್ಷ ಶಿವರಾಜ ಮೇಸ್ತ ಮುಖಂಡತ್ವದಲ್ಲಿ ಸಂಭ್ರಮವನ್ನು ಹೆಚ್ಚಿಸಲು ಸಜ್ಜಾಗುತ್ತಿದ್ದಾರೆ. ಹಗಲು ರಾತ್ರಿ ಎನ್ನದೆ ಸೇವೆ ಮಾಡುವ ರಿಕ್ಷಾ ಚಾಲಕರಿಗೂ ಒಳಿತಾಗಲಿ ಎಂದು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಪ್ರಕಾಶ್ ನಾಯ್ಕ, ಡಿ.ಎಂ. ನಾಯ್ಕ, ಪ್ರಕಾಶ ಮೇಸ್ತ, ಬಸ್ಟೆವ್ ಲೋಫೀಸ್, ನಿತಿನ್ ಮೇಸ್ತ, ಈಶ್ವರ ಮೇಸ್ತ, ಕಿರಣ, ಉಲ್ಲಾಸ್ ಕೊನೇರಿ, ದತ್ತು ನಾಯ್ಕ, ರಾಜೇಶ, ನಾಗೇಂದ್ರ, ಗಜಾನನ, ಆನಂದ ನಾಯ್ಕ ಮತ್ತಿತರರು ಇದ್ದರು.