Slide
Slide
Slide
previous arrow
next arrow

ಬಡವರಿಗೂ ಕುಡಿಯುಲು ಶುದ್ಧ ನೀರು ಸಿಗಬೇಕು: ಅನಂತಮೂರ್ತಿ ಹೆಗಡೆ

300x250 AD

ದಾಂಡೇಲಿ : ನಗರದ ಕೇಂದ್ರ ಬಸ್‌ ನಿಲ್ದಾಣದಲ್ಲಿ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಅನಂತಮೂರ್ತಿ ಹೆಗಡೆಯವರು ಕೊಡುಗೆಯಾಗಿ ನೀಡಿದ ಶುದ್ಧ ಕುಡಿಯುವ ನೀರಿನ ಘಟಕವನ್ನು ಗುರುವಾರ ಉದ್ಘಾಟಿಸಿದರು.

ನೂತನ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅನಂತಮೂರ್ತಿ ಹೆಗಡೆ, ಪ್ರತಿಯೊಬ್ಬನಿಗೂ ಕುಡಿಯುವ ನೀರು ಅತಿ ಅಗತ್ಯವಾಗಿ ಬೇಕಾಗಿದ್ದು, ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಅದರಲ್ಲಿಯೂ ಬಡವರಿಗೆ ಹಣವನ್ನು ಕೊಟ್ಟು ಕುಡಿಯುವ ನೀರು ಖರೀದಿಸಲು ಕಷ್ಟ ಸಾಧ್ಯ. ಈ ನಿಟ್ಟಿನಲ್ಲಿ ನಮ್ಮ ಟ್ರಸ್ಟ್ ವತಿಯಿಂದ ಇಲ್ಲಿಯ ಬಸ್ ನಿಲ್ದಾಣಕ್ಕೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಒದಗಿಸಿಕೊಡಲಾಗಿದೆ. ಈಗಾಗಲೆ ಜಿಲ್ಲೆಯಾದ್ಯಂತ ನೂರಕ್ಕೂ ಹೆಚ್ಚು ಶಾಲಾ-ಕಾಲೇಜು ಮತ್ತು ಬಸ್‌ ನಿಲ್ದಾಣ, ಆಸ್ಪತ್ರೆಗಳಿಗೆ ಉಚಿತವಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನು ನಮ್ಮ ಟ್ರಸ್ಟ್ ಮೂಲಕ ನೀಡಲಾಗಿದೆ. ಸಮಾಜ ಎಲ್ಲವನ್ನು ನಮಗೆ ಕೊಟ್ಟಾಗ ಸಮಾಜಕ್ಕೆ ನಮ್ಮ ಕೊಡುಗೆ ಕೂಡ ಅತಿ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಈ ಅಳಿಲ ಸೇವೆಯ ಪ್ರಯೋಜನವನ್ನು ಸಾರ್ವಜನಿಕರು, ಪ್ರಯಾಣಿಕರು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

300x250 AD

ಸಾರಿಗೆ ಘಟಕದ ವ್ಯವಸ್ಥಾಪಕರಾದ ಎಲ್.ಎಚ್.ರಾಥೋಡ್ ಅವರು ಮಾತನಾಡಿ ಬಸ್ ನಿಲ್ದಾಣಕ್ಕೆ ಅತಿ ಅವಶ್ಯವಾಗಿ ಬೇಕಾಗಿದ್ದ ಶುದ್ಧ ಕುಡಿಯುವ ನೀರಿನ ಘಟಕವನ್ನು ಅನಂತಮೂರ್ತಿ ಹೆಗಡೆಯವರು ಒದಗಿಸಿ ಕೊಟ್ಟಿದ್ದಾರೆ. ಅವರ ಈ ಸೇವೆಗೆ ಸಾರಿಗೆ ಘಟಕದ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಚಾರಿ ನಿರೀಕ್ಷಕರಾದ ಲಿಂಗರಾಜು, ಅನಂತಮೂರ್ತಿ‌ ಹೆಗಡೆಯವರ ತಂದೆ ಮಹಾಬಲೇಶ್ವರ ಹೆಗಡೆ, ಟ್ರಸ್ಟಿನ ಸಂತೋಷ್ ನಾಯ್ಕ, ಸ್ಥಳೀಯ ಪ್ರಮುಖರಾದ ಇಲಿಯಾಸ ಕಾಟಿ, ರವಿ‌ ಮಾಳಕರಿ, ಬಶೀರ್ ಮೊದಲಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top