ಶಿರಸಿ: ಪೊಲೀಸ್ ಇಲಾಖೆ ವತಿಯಿಂದ ನಡೆಸುತ್ತಿರುವ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಶಿರಸಿ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜ.16ರಂದು ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಾಗಾರ ನಡೆಯಿತು.ಲಯನ್ಸ್ ಸಮೂಹ ಶಾಲೆಗಳ ಪ್ರಾಂಶುಪಾಲರಾದ ಶಶಾಂಕ ಹೆಗಡೆ ಸರ್ವರನ್ನೂ ಸ್ವಾಗತಿಸಿದರು. ಶಿರಸಿಯ ಖ್ಯಾತ ಮಕ್ಕಳ ತಜ್ಞ ಡಾ.ದಿನೇಶ್ ಹೆಗಡೆ ರಸ್ತೆ ಜಾಗೃತಿ ಬಗ್ಗೆ ಮಾಹಿತಿ ನೀಡಿದರು. ಖ್ಯಾತ ನೇತ್ರ ತಜ್ಞರಾದ ಶಿವರಾಂ ಕೆವಿ ಅಪಘಾತಗಳ ಬಗ್ಗೆ ಮತ್ತು ಅವುಗಳನ್ನು ತಡೆಯುವ ಬಗ್ಗೆ ಮಾಹಿತಿ ನೀಡಿದರು.ಮತ್ತು ಹೆಡ್ ಕಾನ್ಸ್ಟೇಬಲ್ ರಮೇಶ್ ಮುಚ್ಚಂಡಿಯವರು, ರಸ್ತೆ ಜಾಗೃತಿ ಬಗ್ಗೆ ಸ್ವತಃ ನಾವು ಯಾವ ಎಚ್ಚರಿಕೆ ತೆಗೆದುಕೊಳ್ಳಬೇಕು ಎನ್ನುವುದರ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಲಯನ್ಸ್ ಶಾಲೆಯ ವಿದ್ಯಾರ್ಥಿನಿಯರಾದ, ಗೈಡ್ಸ್ ಕಂಪನಿ ಲೀಡರ್ ಕುಮಾರಿ ಅಧೀತಿ ನಾಯ್ಕ ಇಂದಿನ ಕಾರ್ಯಕ್ರಮದ ನಿರೂಪಣೆಯನ್ನು ಹಾಗೂ ಗೈಡ್ ಪೆಟ್ರೋ ಲೀಡರ್ ಕುಮಾರಿ ಸಮೀಕ್ಷಾ ರಾಯ್ಕರ್ ವಂದನಾರ್ಪಣೆಯನ್ನು ನಡೆಸಿಕೊಟ್ಟರು.
ಸ್ಕೌಟ್ ಮಾಸ್ಟರ್ ರಾಘವೇಂದ್ರ ಹೊಸೂರ್ ಮತ್ತು ಗೈಡ್ ಕ್ಯಾಪ್ಟನ್ ಶ್ರೀಮತಿ ಚೇತನಾ ಪಾವಸ್ಕರ್ ಇವರ ಮುಂದಾಳತ್ವದಲ್ಲಿ ನಡೆದ ಇಂದಿನ ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು ,ಸಹ ಶಿಕ್ಷಕರು ಭಾಗವಹಿಸಿ ಸದುಪಯೋಗ ಪಡೆದರು.