Slide
Slide
Slide
previous arrow
next arrow

ಶಾರ್ಟ್ ಸರ್ಕ್ಯೂಟ್‌: ಸುಟ್ಟು ಕರಕಲಾದ ಕಸದರಾಶಿ

300x250 AD

ಸಿದ್ದಾಪುರ: ಪಟ್ಟಣದ ಜೋಗ ರಸ್ತೆಯ ಪಕ್ಕದಲ್ಲಿರುವ ಪಪಂನ ಘನತ್ಯಾಜ್ಯ ಘಟಕಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಬಿದ್ದು ಸಂಗ್ರಹಿಸಿದ್ದ ಕಸದರಾಶಿ ಸುಟ್ಟು ಕರಕಲಾಗಿದ್ದು ಹೆಚ್ಚಿನ ಯಾವುದೇ ಅನಾಹುತ ಸಂಭವಿಸಿಲ್ಲ. ಬೆಂಕಿಬಿದ್ದ ಸುದ್ದಿ ತಿಳಿಯುತ್ತಿದ್ದಂತೆ ಪಪಂ ಅಧಿಕಾರಿಗಳು, ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿನಂದಿಸಲು ಅಗ್ನಿಶಾಮಕ ದಳದೊಂದಿಗೆ ಪಪಂನ ನೀರು ಸರಬರಾಜು ಮಾಡುವ ನೀರಿನ ಟ್ಯಾಂಕರ್ ಹಾಗೂ ಖಾಸಗಿಯಾಗಿ ನೀರು ಸರಬರಾಜು ಮಾಡುವವರು ಬೆಂಕಿ ನಂದಿಸುವಲ್ಲಿ ಮುಂದಾಗಿದ್ದರು. ಸ್ಥಳದಲ್ಲಿ ಪಪಂ ಮುಖ್ಯಾಧಿಕಾರಿ ಜೆ.ಆರ್.ನಾಯ್ಕ, ಇಂಜಿನಿಯರ್ ರಮೇಶ ನಾಯ್ಕ ಹಾಗೂ ಸಿಬ್ಬಂದಿಗಳು ಬೆಂಕಿ ಪೂರ್ಣ ಆರುವವರಿಗೂ ಸ್ಥಳದಲ್ಲಿದ್ದರು.

300x250 AD
Share This
300x250 AD
300x250 AD
300x250 AD
Back to top