Slide
Slide
Slide
previous arrow
next arrow

ದೇವರ ಸಮವಾಗಿ ಹಿರಿಯರನ್ನು ಪೂಜಿಸಿ: ಯೋಗೇಂದ್ರ ಸ್ವಾಮೀಜಿ

300x250 AD

ಸಿದ್ದಾಪುರ:  ದೇವರನ್ನು ಹೇಗೆ ಪೂಜಿಸಬೇಕು ಎನ್ನುವುದನ್ನು ಎಲ್ಲರು ತಿಳಿದುಕೊಂಡಿರಬೇಕು. ಹಬ್ಬ ಆಚರಣೆಗಳನ್ನು ಶ್ರದ್ಧೆಯಿಂದ ಮಾಡಬೇಕು ಹಾಗೂ ನಮಗಾಗಿ ಹಿರಿಯರು ಕಷ್ಟಪಟ್ಟು ಸಾಕಿ ಸಲುಹಿ ನಮ್ಮ ಬದುಕಿಗೆ ಆಸ್ತಿ ಮಾಡಿಟ್ಟು ಹೋಗಿದ್ದಾರೆ. ಅವರಿಗಾಗಿ ನಾವು ಏನನ್ನು ಮಾಡಿಲ್ಲ  ಅವರ ಆತ್ಮಕ್ಕೆ ತೃಪ್ತಿ ಆಗುವ ಹಾಗೆ ಹಿರಿಯರ ಹಬ್ಬವನ್ನು ಮಾಡಬೇಕು. ದೇವರ ಸಮಾನ ಅವರನ್ನು ಪೂಜಿಸಬೇಕು ಎಂದು ಕಾರ್ತಿಕೇಯ ಪೀಠ ಸಾರಂಗನ ಜಡ್ಡಿನ ಶ್ರೀಗಳಾದ ಯೋಗೇಂದ್ರ ಸ್ವಾಮೀಜಿಗಳು ಹೇಳಿದರು.

ಅವರು ಲಂಬಾಪುರ ಸಮೀಪದ ಬರಗಾಲಿನಲ್ಲಿ ಶ್ರೀ ಕಾಲಭೈರವೇಶ್ವರ ದೇವರ ಜಾತ್ರಾ ಮಹೋತ್ಸವದ ನಿಮಿತ್ತ ಏರ್ಪಡಿಸಿದ ಧರ್ಮಸಭೆಯಲ್ಲಿ ದಿವ್ಯಸಾನಿದ್ಯ ವಹಿಸಿ ಆಶೀರ್ವಚನ ನೀಡಿದರು.ಕಾಂಗ್ರೆಸ್ ಮುಖಂಡ ಹಿರಿಯ ವಕೀಲ ಜಿ.ಟಿ.ನಾಯ್ಕ್  ಮಾತನಾಡಿ, ಧರ್ಮ ಎಂದರೆ  ಸಮಾಜದಲ್ಲಿ ಶಾಂತಿಯನ್ನು ಬೆಳೆಸುವ ಎಲ್ಲರ ಪ್ರಗತಿಗೆ ಕಾರಣವಾಗುವಂತ ಧರ್ಮವಾಗಬೇಕೇ ಹೊರತು ಇನ್ನೊಬ್ಬರನ್ನು ತುಳಿದು ಅದನ್ನು ಬಳಸಿ ಮೇಲೆ ಬರಲಿಕ್ಕೆ ಬಳಕೆ ಆಗವಂತದ್ದು ಆಗಬಾರದು, ಧರ್ಮ ಎನ್ನುವುದು ನಮಗೆ ನೆಮ್ಮದಿಯನ್ನು ನೀಡಬೇಕು. ನಮ್ಮೆಲ್ಲರ ಬದುಕಿಗೆ ಒಳಿತನ್ನು ಮಾಡುವ ಒಬ್ಬರೊಬ್ಬರನ್ನು ಬೆರೆತು ಬೆಳಸುವಂತಾಗಬೇಕು ಎಂದರು. ಪ್ರಮುಖರಾದ ಸಿ.ಆರ್‌. ನಾಯ್ಕ್ ಮಾತನಾಡಿದರು.

300x250 AD

ಈ ಸಂದರ್ಭದಲ್ಲಿ ಜಿ.ಕೆ.ನಾಯ್ಕ್ ವಾಜಗೋಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಸರಸ್ವತಿ ಗೌಡ,ಮತ್ತಿತರರು ಉಪಸ್ಥಿತರಿದ್ದರು.  ಆಡಳಿತ ಮಂಡಳಿ ಅಧ್ಯಕ್ಷ ಎನ್. ಡಿ. ನಾಯ್ಕ್ ಸ್ವಾಗತಿಸಿದ ಕಾರ್ಯಕ್ರಮವನ್ನು ಬಾಲಚಂದ್ರ ನಾಯ್ಕ್ ನಿರೂಪಿಸಿದರೆ, ಕೆ. ಬಿ. ನಾಯ್ಕ್ ವಂದಿಸಿದರು. ಇದಕ್ಕೂ ಮೊದಲು ದೇವರ ಪಲ್ಲಕ್ಕಿ ಉತ್ಸವ ಊರಿನ ಪ್ರಮುಖ ರಸ್ತೆಯಲ್ಲಿ ಸಾಗಿತು. ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಸಂಕ್ರಾಂತಿ ಉತ್ಸವ ಕಾರ್ಯಕ್ರಮವು ಗುರುವಾರದವರೆಗೂ ನಡೆಯಲಿದೆ.

Share This
300x250 AD
300x250 AD
300x250 AD
Back to top