Slide
Slide
Slide
previous arrow
next arrow

ದಾಂಡೇಲಿಗರ ಅಚ್ಚುಮೆಚ್ಚಿನ ಅಬ್ದುಲ್ ಶೇಖ್ ವಿಧಿವಶ

300x250 AD

ದಾಂಡೇಲಿ : ನಗರದ ಟೌನ್ ಶಿಪ್ ನಿವಾಸಿ‌ ಹಾಗೂ ಎಲ್ಲರ ಅಚ್ಚುಮೆಚ್ಚಿನ ಪ್ರೀತಿಯ ಡಾಲಿ ಎಂದೇ ಕರೆಸಿಕೊಳ್ಳುತ್ತಿದ್ದ 47 ವರ್ಷದ ಅಬ್ದುಲ್ ಶೇಖ ಅವರು ಭಾನುವಾರ ವಿಧಿವಶರಾದರು.

ಚಾಲಕರಾಗಿ ಕೆಲಸವನ್ನು ನಿರ್ವಹಿಸುತ್ತಿದ್ದ ಅಬ್ದುಲ್ ಶೇಖ, ದಾಂಡೇಲಿಯ ನಿಸರ್ಗ ಪ್ರವಾಸೋದ್ಯಮ ಸಂಸ್ಥೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಚಾಲಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದರು. ಕಳೆದ ಕೆಲ ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅಬ್ದುಲ್ ಶೇಖ ಭಾನುವಾರ ಮಧ್ಯಾಹ್ನ ವಿಧಿವಶರಾದರು.ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಸಂಖ್ಯೆಯಲ್ಲಿ ಬಂಧು ಬಳಗವನ್ನು ಅಗಲಿದ್ದಾರೆ

300x250 AD

ಮೃತರ ನಿಧನಕ್ಕೆ ಪ್ರವಾಸೋದ್ಯಮಿಗಳಾದ ಅನಿಲ್ ಪಾಟ್ನೇಕರ್, ಶಮಲ್ ಅಬ್ದುಲ್ಲ ಸೇರಿದಂತೆ ನಗರದ ಗಣ್ಯರನೇಕರು ಕಂಬನಿಯನ್ನು ಮಿಡಿದು ಸಂತಾಪವನ್ನು ಸೂಚಿಸಿದ್ದಾರೆ.

Share This
300x250 AD
300x250 AD
300x250 AD
Back to top