Slide
Slide
Slide
previous arrow
next arrow

ಬಾಲ್ಯ ಸ್ನೇಹಿತನ ಮನೆಗೆ ದೇಶಪಾಂಡೆ ಭೇಟಿ

300x250 AD

ಹಳಿಯಾಳ: ಅವರು ಒಬ್ಬರನ್ನೊಬ್ಬರು ಬಿಟ್ಟಿರಲಾರದ ಬಾಲ್ಯದ ಗೆಳೆಯರು. ಒಟ್ಟಿನಲ್ಲಿ ಎಲ್ಲರ ಮುದ್ದಿನ ಮತ್ತು ತುಂಟಾಟದ ಗೆಳೆಯರಾಗಿ ಬೆಳೆದವರು. ಪ್ರಾಥಮಿಕ ಶಿಕ್ಷಣವನ್ನು ಒಂದೆ ಶಾಲೆಯಲ್ಲಿ ಒಂದೇ ಬೆಂಚಿನಲ್ಲಿ ಪೂರೈಸಿದವ ಗೆಳೆಯರೀರ್ವರ ಭೇಟಿಯಿಂದ ಹಲವಾರು ನೆನಪುಗಳನ್ನು ಮರುಕಳಿಸಿತು.

ಹಳಿಯಾಳ ಪಟ್ಟಣದ ಬಿ.ಕೆ.ಹಳ್ಳಿ ರಸ್ತೆಯಲ್ಲಿ ಬರುವ ಶಾಂತಿನಗರದ ನಿವಾಸಿ ಹಾಗೂ ಬಹುಕಾಲದ ಗೆಳೆಯ ಮಾತ್ರವಲ್ಲದೆ ಕ್ಲಾಸ್ಮೇಟ್ ಪ್ರಭಾಕರ್ ಪಾಟ್ನೆಕರ್ ಅವರ ಮನೆಗೆ ಭಾನುವಾರ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆ ಭೇಟಿ ನೀಡಿ ಯೋಗ ಕ್ಷೇಮವನ್ನು ವಿಚಾಎರಿಸಿದರು.ಲೆಎಕ

ಅನಾರೋಗ್ಯದಿಂದಿರುವ ಪ್ರೆಭಾಕೆರ್ ಪಾಟ್ನೇಕರ್ ಅವರ ಆರೋಗ್ಯವನ್ನು ವಿಚಾರಿಸಿದ ಆರ್.ವಿ.ದೇಶಪಾಂಡೆ ಮಾತಿನಲ್ಲಿ ತಮ್ಮ ಬಾಲ್ಯದ ಸಿಹಿ ನೆನಪುಗಳನ್ನು ಮೆಲುಕು ಹಾಕಿದರು. ಶಾಲೆಯ ಬ್ಯಾಗಿನಲ್ಲಿ ಪುಸ್ತಕದ ಜೊತೆಗೆ ಪೇರಳೆ, ಮಾವು ಹೀಗೆ ಇನ್ನಿತರ ಹಣ್ಣುಗಳನ್ನು ತಂದು ಹಂಚಿಕೊಂಡು ತಿನ್ನುತ್ತಿದ್ದ ನೆನಪುಗಳನ್ನು ದೇಶಪಾಂಡೆಯವರು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು. ರಜಾ ದಿನಗಳಲ್ಲಿ ದೇಶಪಾಂಡೆಯವರು ಪ್ರಭಾಕರ್ ಪಾಟ್ನೆಕರ್ ಮನೆಯಲ್ಲಿ ಹೆಚ್ಚಾಗಿ ಇರುತ್ತಿದ್ದದ್ದನ್ನು ನೆನಪಿಸಿಕೊಂಡರು.

300x250 AD

ಬಾಲ್ಯದ ಗೆಳೆತನ ಈವರೆಗೂ ಮುಂದುವರೆದಿರುವುದು ಅವರಿಬ್ಬರ ನಡುವಿನ ಬಾಂಧವ್ಯವನ್ನು ಎತ್ತಿ ತೋರಿಸುತ್ತದೆ. ಕೆಲ ಹೊತ್ತು ಆರ್.ವಿ.ದೇಶಪಾಂಡೆ ಪ್ರಭಾಕರ್ ಪಾಟ್ನೇಕರವರಲ್ಲಿ ಆರೋಗ್ಯದ ಬಗ್ಗೆ ವಿಚಾರಿಸಿ ಖುಷಿಯಿಂದ ಇರುವಂತೆ ವಿನಂತಿಸಿದರು. ತಂದೆಯವರ ಆರೋಗ್ಯಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪುತ್ರ ಅನಿಲ್ ಪಾಟ್ನೇಕರ್ ಜೊತೆ ಕೆಲ ಹೊತ್ತು ದೇಶಪಾಂಡೆ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಪ್ರಭಾಕರ್ ಪಾಟ್ನೇಕರವರ ಪತ್ನಿ ಪ್ರಫುಲ್ಲಾ, ಪ್ರವಾಸೋದ್ಯಮಿಯಾಗಿರುವ ಪುತ್ರ ಅನಿಲ್ ಪಾಟ್ನೇಕರ್, ಅನಿಲ್ ಪಾಟ್ನೇಕರ್ ಅವರ ಪತ್ನಿ ಪ್ರಗತಿ, ಮಕ್ಕಳಾದ ಅನನ್ಯ ಮತ್ತು ಅಮೂಲ್ಯ, ಮಾವ ಹಾಗೂ ಎಪಿಎಂಸಿ ಮಾಜಿ ಅಧ್ಯಕ್ಷರಾದ ಪ್ರಕಾಶ್ ಹನುಮಶೆಠ್, ಅಮಿತ್ ಹನುಮಶೇಠ್ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top