Slide
Slide
Slide
previous arrow
next arrow

ಕಾರ್ಮಿಕ ಮಹಿಳೆ ಸಾವಿನ ತನಿಖೆಗೆ ಡಿ.ಸ್ಯಾಮಸನ್ ಆಗ್ರಹ

300x250 AD

ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿನ ಜಗಲ್ ಪೇಟ್ ಅರಣ್ಯ ವಲಯದ ಕಾಮ್ರಾ ಅರಣ್ಯ ಪ್ರದೇಶದಲ್ಲಿ ಅಕೇಶಿಯಾ ನೆಡುತೋಪು ಕಟಾವಣೆಗೆ ಬಂದ ಕಾರ್ಮಿಕ ಮಹಿಳೆಗೆ ವಿಷ ಸರ್ಪ ಕಡಿದ ಪರಿಣಾಮವಾಗಿ ಸಾವನ್ನಪ್ಪಿರುವ ಘಟನೆಯ ಬಗ್ಗೆ ಸಮಸಗ್ರ ತನಿಖೆ ನಡೆಸಿ, ಮೃತಳ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುವಂತೆ ಡಿವೈಎಫ್ಐ ಜಿಲ್ಲಾ ಪ್ರಧಾನ‌ ಕಾರ್ಯದರ್ಶಿ ಡಿ.ಸ್ಯಾಮಸನ್ ಆಗ್ರಹಿಸಿದ್ದಾರೆ.

ಅವರು‌ ನಗರದಲ್ಲಿ‌ ಭಾನುವಾರ‌ ಮಾಧ್ಯಮಕ್ಕೆ‌ ನೀಡಿದ ಪ್ರಕಟಣೆಯಲ್ಲಿ ಜನವರಿ 13 ರಂದು ಈ ಘಟನೆ ನಡೆದಿದ್ದು,
ಕಲಘಟಗಿ ತಾಲ್ಲೂಕಿನ ದೇವಿಕೊಪ್ಪ ತಾಂಡಾದ ಮಹಿಳೆ ತನ್ನ ಗಂಡನ ಜೊತೆ ಹಳಿಯಾಳ ಅರಣ್ಯ ವಿಭಾಗದ ಜಗಲಬೇಟ್ ಅರಣ್ಯ ವಲಯದ ಕಾಮ್ರಾ ಅರಣ್ಯ ಪ್ರದೇಶದಲ್ಲಿನ ಅಕೇಶಿಯಾ ನೆಡುತೋಪು ಕಟಾವಣೆಗೆ ಸ್ಥಳೀಯ ಸಿಬ್ಬಂದಿಯವರು ಕರೆಯಿಸಿ ಎಂದಿನಂತೆ ನೆಡುತೋಪಿನಲ್ಲಿ ಮರ ಕಡಿಯುವ ಕಾಯಕದಲ್ಲಿ ತೊಡಗಿದ್ದಾಗ ವಿಷ ಸರ್ಪ ಕಡಿದು ಹೆಚ್ಜಿನ ಚಿಕಿತ್ಸೆಗೆ ಖಾನಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.

ಮಾಹಿತಿಗಳ ಪ್ರಕಾರ ಸಾವನ್ನಪ್ಪಿದ ಕಾರ್ಮಿಕ ಮಹಿಳೆ ಗುತ್ತಿಗೆದಾರರ ಪರವಾಗಿ ಬಂದಿರದೆ,ವಲಯ ಅರಣ್ಯಧಿಕಾರಿಯೇ ಕಾಮಗಾರಿ ನಿರ್ವಹಿಸುತ್ತಿದ್ದರು ಎಂದು ಮಾಹಿತಿ ದೊರಕಿದೆ. ಮೃತ ಕಾರ್ಮಿಕ ಮಹಿಳೆ ಗುತ್ತಿಗೆದಾರರಿಂದ ಯಾವುದೇ ನೋಂದಣಿ ಇಲ್ಲದೆ ಇರುವುದರಿಂದ ಸರ್ಕಾರದಿಂದ ಯಾವುದೇ ರೀತಿಯ ಪರಿಹಾರ ಕೂಡ ಸಿಗದೇ ಇರುವ ಪರಿಸ್ಥಿತಿ ಇದೆ.

300x250 AD

ನಿಯಮದಂತೆ ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆದಾರರು ಎಲ್ಲಾ ಕಾರ್ಮಿಕರ ನಿಧಿ ಸರ್ಕಾರಕ್ಕೆ ಕಟಾವಣೆ ಮಾಡಿ ನೋಂದಣಿ ಮಾಡಿಸಿರಬೇಕು. ಆದರೆ ಈ ಪ್ರಕರಣದಲ್ಲಿ ಹೆಸರಿಗೆ ಮಾತ್ರ ಕಾಗದ ಪತ್ರದಲ್ಲಿ ಗುತ್ತಿಗೆದಾರ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರೇ ಬೇರೆಯಾಗಿದೆ ಎಂಬ ಮಾಹಿತಿಯಿದೆ. ಈ ಘಟನೆಯ ಬಗ್ಗೆ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಯವರು ಉನ್ನತ ಮಟ್ಟದ ತನಿಖೆ ಮಾಡಿ ಮೃತ ಕಾರ್ಮಿಕ ಮಹಿಳೆಯ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಡಿ.ಸ್ಯಾಮಸನ್ ಆಗ್ರಹಿಸಿದ್ದಾರೆ.

Share This
300x250 AD
300x250 AD
300x250 AD
Back to top