Slide
Slide
Slide
previous arrow
next arrow

ಯುವ ಬ್ರಿಗೇಡ್‌ನಿಂದ ‘ಕ್ಷೇತ್ರ ಸ್ವಚ್ಛತೆ’ ಕಾರ್ಯಕ್ರಮ

300x250 AD

ಕುಮಟಾ: ಯುವಾ ಬ್ರಿಗೇಡ್ ಕುಮಟಾ ವತಿಯಿಂದ ಜ.14ರಂದು ರಾಮದೇವಾಲಯ ಚಿತ್ರಗಿಯಲ್ಲಿ ಸ್ವಚ್ಚ ಮಾಡುವ ಮೂಲಕ ಕ್ಷೇತ್ರ ಸ್ವಚ್ಚತೆ ಕಾರ್ಯಕ್ರಮ ಮಾಡಲಾಯಿತು. ಇದೆ ತಿಂಗಳು 22 ಕ್ಕೆ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಆಗಲಿದ್ದು ದೇಶದಲ್ಲಿಯೇ ಸಂಭ್ರಮದ ವಾತಾವರಣ ಇರಲಿದೆ. ಈ ಶುಭ ಸಂಧರ್ಭದಲ್ಲಿ ಯುವಾ ಬ್ರಿಗೇಡ್ ಕುಮಟಾ ತಂಡವು ರಾಮ ದೇವಾಲಯಕ್ಕೆ ತೆರಳಿ ಒಳಗಡೆ ಸ್ವಚ್ಚ ಮಾಡುವದರ ಮೂಲಕ ರಾಮನ ಸ್ವಾಗತಕ್ಕೆ ಪುಟ್ಟ ಅಳಿಲು ಸೇವೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಯುವಾ ಬ್ರಿಗೇಡ್ ಮಂಗಳೂರು ವಿಭಾಗ ಸಹ ಸಂಚಾಲಕರಾದ ಸತೀಶ ಪಟಗಾರ, ಸದಸ್ಯರಾದ ರವೀಶ ನಾಯ್ಕ, ಗಣಪತಿ ಪಟಗಾರ, ಗೌರೀಶ ನಾಯ್ಕ, ಸಂದೀಪ ಮಡಿವಾಳ, ಪ್ರಕಾಶ ನಾಯ್ಕ, ಶ್ರವಣ ನಾಯ್ಕ ಹಾಗೂ ಅಣ್ಣಪ್ಪ ನಾಯ್ಕ ಇದ್ದರು.

300x250 AD
Share This
300x250 AD
300x250 AD
300x250 AD
Back to top