Slide
Slide
Slide
previous arrow
next arrow

ನಗರೆ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಯಶಸ್ವಿ

300x250 AD

ಹೊನ್ನಾವರ : ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಗರೆ ನಂ.1ರಲ್ಲಿ ಶುಕ್ರವಾರ ವಾರ್ಷಿಕ ಸ್ನೇಹ ಸಮ್ಮೇಳನ ಅದ್ಧೂರಿಯಾಗಿ ನೆರವೇರಿತು.

ಮುಗ್ವಾ ಗ್ರಾಮ ಪಂಚಾಯತ ಅಧ್ಯಕ್ಷರಾದ ಆಯ್.ವಿ‌.ನಾಯ್ಕ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಸಭೆಯಲ್ಲಿ ಗ್ರಾ. ಪಂ. ಸದಸ್ಯೆ ತೇಜಸ್ವಿನಿ ಹೆಗಡೆ ಉಪಸ್ಥಿತರಿದ್ದರು. ಶಿಕ್ಷಣ ಸಂಯೋಜರಾದ ಪ್ರಮೋದ ನಾಯ್ಕ ಶಾಲಾ ಪತ್ರಿಕೆ ‘ಮಯೂರ’ವನ್ನು ಬಿಡುಗಡೆ ಮಾಡಿದರು. ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷರಾದ ಎಮ್.ಜಿ.ನಾಯ್ಕ ಅತಿಥಿಗಳಾಗಿ ಭಾಗವಹಿಸಿದ್ದರು. ಸತೀಶ ನಾಯ್ಕ ಬಿ.ಆರ್.ಪಿ. ಪ್ರಮೀಳಾ ಕೆ.ಎಸ್. ಸಿ.ಆರ್.ಪಿ. ಸಭೆಯಲ್ಲಿ ಉಪಸ್ಥಿತರಿದ್ದರು. ಎಸ್. ಡಿ.ಎಮ್.ಸಿ. ಅಧ್ಯಕ್ಷರಾದ ಉದಯ ಜಿ.ನಾಯ್ಕ ಘನ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ಅತ್ಯುತ್ತಮವಾಗಿ ನೆರವೇರಿತು. ಶಾಲೆಯ ಹಳೆ ವಿದ್ಯಾರ್ಥಿ ನಿವೃತ್ತ ಶಿಕ್ಷಕರಾದ ಷಣ್ಮುಖ ನಾಯ್ಕ ಇವರನ್ನು ಸನ್ಮಾನಿಸಲಾಯಿತು.ಶಾಲಾ ಮಕ್ಕಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಮಕ್ಕಳೇ ಸಾದರ ಪಡಿಸಿದ ಯಕ್ಷಗಾನ ‘ವೀರಮಣಿ ಕಾಳಗ’ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

300x250 AD
Share This
300x250 AD
300x250 AD
300x250 AD
Back to top