Slide
Slide
Slide
previous arrow
next arrow

ಫೆ.2ರಿಂದ ‘ಯಕ್ಷದಶಾಹ’ ಪೌರಾಣಿಕ ಯಕ್ಷೋತ್ಸವ

300x250 AD

ಭಟ್ಕಳ: ಶ್ರೀ ಮಹಿಷಾಸುರ ಮರ್ಧಿನಿ ಯಕ್ಷಕಲಾ ಪ್ರತಿಷ್ಟಾನ ಗೋಳಿಕುಂಬ್ರಿ ಹಾಗೂ ಪೂರ್ಣಚಂದ್ರ ಯಕ್ಷಗಾನ ಮಂಡಳಿ ಕೊಂಡದಕುಳಿ ಕುಂಭಾಶಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆಸಿಕೊಂಡು ಬಂದ ಪೌರಾಣಿಕ ಯಕ್ಷಗಾನ ಸಪ್ತಾಹ ಕಾರ್ಯಕ್ರಮಕ್ಕೆ ಈ ವರ್ಷ ದಶಮಾನೋತ್ಸವ ಸಂಭ್ರಮ ಎಂದು ಶ್ರೀ ಮಹಿಷಾಸುರ ಮರ್ಧಿನಿ ಯಕ್ಷಕಲಾ ಪ್ರತಿಷ್ಟಾನದ ಅಧ್ಯಕ್ಷ ನಾಗರಾಜ ಮಧ್ಯಸ್ಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಬಾರಿ ಶ್ರೀ ರಾಘವೇಶ್ವರ ಭಾರತೀ ಹವ್ಯಕ ಸಭಾ ಭವನದಲ್ಲಿ ಪೌರಾಣಿಕ ಯಕ್ಷೋತ್ಸವ “ಯಕ್ಷದಶಾಹ” ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಫೆ.2ರಿಂದ ಫೆ.11ರ ತನಕ ವಿವಿಧ ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದ್ದಾರೆ. ಫೆ.2ರಂದು ‘ಸಮರ ಸೌಗಂಧಿಕಾ’, ಫೆ.3ರಂದು ‘ಸೀತಾ ವಿಯೋಗ’, ಫೆ.4ರಂದು ‘ಕಪಾಲ ಗ್ರಹಣ’, ಫೆ.5ರಂದು ‘ಧುರವೀಳ್ಯ’, ಫೆ.6ರಂದು ‘ಶುಕ್ರಶಾಪ’, ಫೆ.7ರಂದು ‘ಬರ್ಬರೀಕ’, ಫೆ.8ರಂದು ‘ಸತಿಶಕ್ತಿ’, ಫೆ.9ರಂದು ‘ಮಂಥರಾ ಕುಮಂತ್ರ’, ಫೆ.10ರಂದು ‘ಸತ್ಯಮೇವ ಜಯತೆ’, ಫೆ.11ರಂದು ‘ವೀರವರ್ಮ ಕಾಳಗ’ ಯಕ್ಷಗಾನ ಪ್ರದರ್ಶನವು ಪೂರ್ಣಚಂದ್ರ ಯಕ್ಷಗಾನ ಮಂಡಳಿ ಕೊಂಡದಕುಳಿ ಕಲಾವಿದರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ನಡೆಯಲಿದೆ.

300x250 AD

ಯಕ್ಷದಶಾಹ ಕಾರ್ಯಕ್ರಮದಲ್ಲಿ ಭಾಗವತರಾಗಿ ಸರ್ವೇಶ್ವರ ಹೆಗಡೆ ಮೂರೂರು, ಗಣೇಶ ಯಾಜಿ ಇಡಗುಂಜಿ, ಮೃದಂಗ ವಾದಕರಾಗಿ ಗಜಾನನ ಭಂಡಾರಿ ಬೋಳಗೆರೆ, ಲಕ್ಷ್ಮಿನಾರಾಯಣ ಹೆಗಡೆ ಸಂಪ, ಸ್ತ್ರೀವೇಷದಲ್ಲಿ ಸುಬ್ರಹ್ಮಣ್ಯ ಹೆಗಡೆ ಮೂರೂರು, ಹಾಸ್ಯ ಕಲಾವಿದರಾಗಿ ಶ್ರೀಧರ ಹೆಗಡೆ ಚಪ್ಪರಮನೆ, ಮುಮ್ಮೇಳದಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆ, ಗಣಪತಿ ಹೆಗಡೆ ತೋಟಿಮನೆ, ನಾಗೇಶ ಗೌಡ ಕುಳಿಮನೆ, ಮಾರುತಿ ನಾಯ್ಕ, ವಿನಾಯಕ ಮಧ್ಯಸ್ಥ, ವಿವೇಕ ಮಧ್ಯಸ್ಥ, ಅತಿಥಿ ಕಲಾವಿದರುಗಳಾಗಿ ಭಾಗವತಿಕೆಯಲ್ಲಿ ವಿಧ್ವಾನ ಗಣಪತಿ ಭಟ್ಟ ಯಲ್ಲಾಪುರ, ಕೇಶವ ಹೆಗಡೆ ಕೊಳಗಿ, ರಾಮಕೃಷ್ಣ ಹೆಗಡೆ ಹಿಲ್ಲೂರು, ರಾಘವೇಂದ್ರ ಆಚಾರ್ಯ ಜನ್ಸಾಲೆ, ಶಂಕರ ಭಟ್ಟ ಬ್ರಹ್ಮೂರು, ಸುರೇಶ ಶೆಟ್ಟರು, ಮೃದಂಗದಲ್ಲಿ ಶಂಕರ ಭಾಗವತ ಯಲ್ಲಾಪುರ, ಪರಮೇಶ್ವರ ಭಂಡಾರಿ ಕರ್ಕಿ, ರಾಘವೇಂದ್ರ ಹೆಗಡೆ ಯಲ್ಲಾಪುರ, ಸುನಿಲ್ ಭಂಡಾರಿ ಕಡತೋಕ, ನರಸಿಂಹ ಹೆಗಡೆ ಮೂರೂರು, ಪಿ.ಕೆ.ಹೆಗಡೆ ಹರಿಕೇರಿ. ಚಂಡೆವಾದನದಲ್ಲಿ ಗಣೇಶ ಗಾಂವ್ಕರ್ ಹಳವಳ್ಳಿ, ಪ್ರಸನ್ನ ಹೆಗ್ಗಾರ, ಗಜಾನನ ಹೆಗಡೆ ಸಾಂತೂರು, ಶಿವಾನಂದ ಕೋಟ, ರಾಮನ್ ಹೆಗಡೆ ಮೂರೂರು, ಮಂಜುನಾಥ ಭಂಡಾರಿ ಕರ್ಕಿ, ಪಾತ್ರಧಾರಿಗಳಾಗಿ ಕೃಷ್ಣ ಯಾಜಿ ಬಳ್ಕೂರು, ಗೋಪಾಲ ಆಚಾರಿ ತೀರ್ಥಹಳ್ಳಿ, ಸುಬ್ರಹ್ಮಣ್ಯ ಹೆಗಡೆ ಚಿಟ್ಟಾಣಿ, ಮಹಾಬಲೇಶ್ವರ ಭಟ್ಟ ಇಟಗಿ, ಈಶ್ವರ ನಾಯ್ಕ ಮಂಕಿ, ಅಶೋಕ ಭಟ್ಟ ಸಿದ್ದಾಪುರ, ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ, ಶ್ರೀಧರ ಭಟ್ಟ ಕಾಸರಕೋಡು, ಶಂಕರ ಹೆಗಡೆ ನೀಲ್ಕೋಡು, ನಾಗರಾಜ ಭಂಡಾರಿ ಗುಣವಂತೆ, ಮಾಧವ ಜೋಗಿ ನಾಗೂರು, ರಕ್ಷಿತ್ ಕುಳಿಮನೆ, ಲೋಕೇಶ ಗುಣವಂತೆ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಲಾಗಿದೆ. ಯಕ್ಷದಶಾಹ ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರ ಸಿಗಂಧೂರಿನ ಪ್ರಧಾನ ಅರ್ಚಕ ಶೇಷಗಿರಿ ಭಟ್ಟ, ಮಹಿಷಮರ್ಧಿನಿ ಯಕ್ಷಕಲಾ ಪ್ರತಿಷ್ಟಾನದ ಸದಸ್ಯರು, ಕೊಂಡದಕುಳಿ ರಾಮಚಂದ್ರ ಹೆಗಡೆ, ಉದ್ಯಮಿ ನಾಗರಾಜ ಭಟ್ಟ ಸೇರಿದಂತೆ ಕಲಾಭಿಮಾನಿಗಳೂ ಸಹಕರಿಸಿದ್ದು ಕಲಾ ಪೋಷಕರು ಹೆಚ್ಚಿನ ಸಹಾಯ ನೀಡುವಂತೆ ಶ್ರೀ ಮಹಿಷಾಸುರ ಮರ್ಧಿನಿ ಯಕ್ಷಕಲಾ ಪ್ರತಿಷ್ಟಾನ ಗೋಳಿಕುಂಬ್ರಿ ಅಧ್ಯಕ್ಷ ನಾಗರಾಜ ಮಧ್ಯಸ್ಥ ಕೋರಿದ್ದಾರೆ.

Share This
300x250 AD
300x250 AD
300x250 AD
Back to top