Slide
Slide
Slide
previous arrow
next arrow

ವಿದ್ಯಾರ್ಥಿಗಳಿಗೆ ನಿಶ್ಚಿತವಾದ ಗುರಿ ಇದ್ದರೆ ಯಾವುದೂ ಅಸಾಧ್ಯವಲ್ಲ: ಮಂಗಲಲಕ್ಷ್ಮೀ ಪಾಟೀಲ

300x250 AD

ಅಂಕೋಲಾ : ವಿದ್ಯಾರ್ಥಿಗಳು ನಿಶ್ಚಿತವಾದ ಶೈಕ್ಷಣಿಕ ಗುರಿಯನ್ನು ಹೊಂದುವದರ ಮೂಲಕ ಸಾಧನೆ ಮಾಡುವದಾದರೆ ಯಾವುದೂ ಅಸಾಧ್ಯವಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಂಗಲಲಕ್ಷ್ಮೀ ಪಾಟೀಲ‌ ಹೇಳಿದರು‌. ಅವರು ಪಿಎಂ ಪ್ರೌಢಶಾಲೆಯ ರೈತಭವನದಲ್ಲಿ ನಡೆದ ಜಿ.ಪಂ. ಉತ್ತರ ಕನ್ನಡ, ಶಾಲಾ ಶಿಕ್ಷಣ ಇಲಾಖೆ ಉ.ಕ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಹಾಗೂ ಪಿ ಎಂ ಹೈಸ್ಕೂಲ ಇವರ ಸಂಯುಕ್ತ ಆಶ್ರಯದಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗಾಗಿ ಸ್ಪೂರ್ತಿಯ ಮಾತುಗಳೊಂದಿಗೆ ಸಂವಾದ ಕಾರ್ಯಕ್ರಮ ಹಾಗೂ ವಿಷಯವಾರು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಮುಂದೆ ಗುರಿ ಇರಬೇಕು ಆ ಗುರಿಯ ಹಿಂದೆ‌ ಮಾರ್ಗದರ್ಶಕರಾಗಿ ಗುರು ಇರಬೇಕು ಆಗ ಮಾತ್ರ ಶಿಕ್ಷಣದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಕೇವಲ ಪರೀಕ್ಷೆ ಬಂದಾಗ ಮಾತ್ರ ಅಥವಾ ಪಾಸಾಗುವದಕ್ಕೆ ಮಾತ್ರ ಓದುವ ಗುರಿಯನ್ನು ಇಟ್ಟುಕೊಳ್ಳದೆ ಉನ್ನತ ಸಾಧನೆ ಮಾಡುವ ಗುರಿಯೊಂದಿಗೆ ಓದಬೇಕು ಎಂದರು. ಪ್ರೌಢಶಾಲಾ ವಿಜ್ಞಾನ ಶಿಕ್ಷಕರ ಸಂಘದ ಅಧ್ಯಕ್ಷ ಸುಧೀರ ನಾಯಕ ಮಾತನಾಡಿ ವಿದ್ಯಾರ್ಥಿಗಳು ಓದನ್ನು ಮುಂದೂಡುವ ಪ್ರವೃತ್ತಿಯನ್ನು ಬಿಡಬೇಕು. ನಾಳೆ ಎನ್ನದೆ ಇಂದೇ ಓದಬೇಕು ಹಾಗೂ ಖಂಡಿತ ಪಾಸಾಗುತ್ತೇನೆ ಎಂಬ ದೃಢಸಂಕಲ್ಪವನ್ನು ಹೊಂದಿರಬೇಕು ಎಂದರು.

ಮಾಧ್ಯಮಿಕ‌ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಣಪತಿ ನಾಯಕ ಮಾತನಾಡಿ ಎಸ್ ಎಸ್ ಎಲ್ ಸಿ ಯಲ್ಲಿ ಜಿಲ್ಲೆಯು‌ ಉತ್ತಮ ಸ್ಥಾನ ಪಡೆಯಬೇಕಾದರೆ ಪ್ರತಿಯೊಂದು ತಾಲೂಕುಗಳು ಉತ್ತಮ ಫಲಿತಾಂಶ ನೀಡಲು ಶ್ರಮಿಸಬೇಕು. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಬೇಕು ಎಂದರು. ವೇದಿಕೆಯಲ್ಲಿ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮೋಹನ‌ ನಾಯ್ಕ, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಎನ್ ವಿ ರಾಠೋಡ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಶಿಕ್ಷಣ ಸಂಯೋಜಕರಾದ ಹರ್ಷಿತಾ ನಾಯಕ ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಕಾರಣಾಂತರಗಳಿಂದ ಅಭ್ಯಸದಲ್ಲಿ ಸ್ವಲ್ಪ ಮಟ್ಟಿಗೆ ಹಿನ್ನಡೆಯಿರುವ ವಿದ್ಯಾರ್ಥಿಗಳ ಜೊತೆಗೆ ಸಂವಾದ ನಡೆಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಹೇಗೆ ಎದುರಿಸುವದು ಮತ್ತು ಅಂಕಗಳನ್ನು ಗಳಿಸುವ ಬಗೆ ಹೇಗೆ ಎನ್ನುವದರ ಕುರಿತು ಮನವರಿಕೆ ಮಾಡಿಕೊಡಲಾಯಿತು.
ಪಿ ಎಂ‌ ಪ್ರೌಢಶಾಲೆಯ ಮಖ್ಯಾಧ್ಯಾಪಕರಾದ ಚಂದ್ರಶೇಖರ ಕಡೆಮನೆ ಸ್ವಾಗತಿಸಿದರು. ಶಿಕ್ಷಕ ಜಿ ಆರ್ ತಾಂಡೇಲ ಕಾರ್ಯಕ್ರಮ ನಿರ್ವಹಿಸಿದರು. ಬಿ ಎಲ್ ನಾಯ್ಕ ಪ್ರಾಸ್ತಾವಿಕ‌ ಮಾತನಾಡಿದರು. ಸುಧಾ ಆಚಾರಿ ವಂದಿಸಿದರು. ಕಾವ್ಯಾ ದೊಡ್ಮನಿ ಪ್ರಾರ್ಥಿಸಿದರು.

300x250 AD

ಬಾಕ್ಸ
ಕಾರ್ಯಾಗಾರಕ್ಕೆ ಸಹ ನಿರ್ದೇಶಕರ ಭೇಟಿ.
ಶಾಲಾ ಶಿಕ್ಷಣ ಇಲಾಖೆಯ ಸಹ ನಿರ್ದೇಶಕರಾದ ಈಶ್ವರ ನಾಯ್ಕ ಹಾಗೂ ಜಿಲ್ಲಾ ಉಪನಿರ್ದೇಶಕರಾದ ಲತಾ ನಾಯಕ ಅವರು ಪಿ ಎಂ ಹೈಸ್ಕೂಲಿನಲ್ಲಿ ನಡೆಯುತ್ತಿರುವ ಕಾರ್ಯಗಾರಕ್ಕೆ ಭೇಟಿ ನೀಡಿದರು. ಕಾರ್ಯಾಗಾರದ ಉದ್ದೇಶ ಮತ್ತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವ ವಿಷಯವಾರು ಶಿಕ್ಷಕರ ಶ್ರಮವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಪಿ‌ ಎಂ ಹೈಸ್ಕೂಲಿನ ಕಾರ್ಯಾಲಯದಲ್ಲಿ ಶಿಕ್ಷಕರ ಜೊತೆ ಸಮಾಲೋಚನೆ ನಡೆಸಿ ಶೈಕ್ಷಣಿಕ ಫಲಿತಾಂಶದ ಕುರಿತು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.
ಈ ವೇಳೆ ಡಿಡಿಪಿಐ ಲತಾ ನಾಯಕ, ಕುಮಟಾ ಡಯಟ್ ಪ್ರಾಚಾರ್ಯ ಎನ್ ಜಿ ನಾಯಕ, ಬಿಇಓ ಮಂಗಲಲಕ್ಷ್ಮೀ‌ ಪಾಟೀಲ, ಹರ್ಷಿತಾ ನಾಯಕ, ಮುಖ್ಯಾಧ್ಯಾಪಕರಾದ ಚಂದ್ರಶೇಖರ ಕಡೆಮನೆ, ಭಾಸ್ಕರ ಗಾಂವಕರ, ಶಿಕ್ಷಕ ಜಿ ಎಸ್ ನಾಯ್ಕ, ಜಿ ಆರ್ ತಾಂಡೇಲ, ರಾಘವೇಂದ್ರ ಮಹಾಲೆ, ಗಣೇಶ ಭಟ್, ರಾಜೇಶ ನಾಯಕ, ರೇಷ್ಮಾ ನಾಯ್ಕ, ಶ್ರುತಿ ನಾಯ್ಕ,ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top