ಕುಮಟಾ: ವೀರಸನ್ಯಾಸಿ ಸ್ವಾಮಿ ವಿವೇಕಾನಂದ ಜಯಂತಿ ಹಿನ್ನೆಲೆಯಲ್ಲಿ ರಾಷ್ಟ್ರೀಯ ಯುವ ದಿನವನ್ನು ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸರಸ್ವತಿ ವಿದ್ಯಾ ಕೇಂದ್ರದಲ್ಲಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಸ್ವಾಮಿ ವಿವೇಕಾನಂದರ ರೀತಿಯಲ್ಲಿ ಉಡುಗೆ ಧರಿಸಿದ ವಿದ್ಯಾರ್ಥಿ ಸಂಕಲ್ಪ ಭಟ್ಟ ವಿವೇಕ ವಾಣಿಯನ್ನು ಎಲ್ಲರಿಗೂ ತಿಳಿಸಿ ಗಮನ ಸೆಳೆದನು. ಇದೇ ಸಂದರ್ಭದಲ್ಲಿ ಪ್ರತೀಕ ಮತ್ತು ಸಂಗಡಿಗರು ಉತ್ತಿಷ್ಟತ ಜಾಗೃತ ಎಂಬ ಗೀತೆಯನ್ನು ಹಾಡಿ ಎಲ್ಲರಿಂದ ಮೆಚ್ಚುಗೆ ಪಡೆದರು.
ಆರಾಧ್ಯ ಸಂಗಡಿಗರು ನೃತ್ಯದ ಮೂಲಕ ರಾಷ್ಟ್ರದ ಜಾಗೃತಿಗೆ ವಿವೇಕಾನಂದರ ಕೊಡುಗೆಯನ್ನು ಸ್ಮರಿಸಿದರು. ಕು. ಸಾನ್ವಿ ವಿವೇಕಾನಂದರ ಬಗ್ಗೆ ಮಾತನ್ನಾಡಿ ಅವರ ಬದುಕು ಹಾಗೂ ಅವರು ಜನತೆಗೆ ನೀಡಿದ ಸಂದೇಶದ ಬಗ್ಗೆ ಮಹತ್ತರ ಅಂಶಗಳನ್ನು ತೆರೆದಿಟ್ಟಳು. ಮುಖ್ಯ ಶಿಕ್ಷಕಿ ಸುಜಾತಾ ನಾಯ್ಕ ವೇದಿಕೆಯಲ್ಲಿದ್ದರು, ಓಂಕಾರ ಭಾಗ್ವತ್ ನಿರೂಪಿಸಿದರೆ, ಶಿಕ್ಷಕಿಯರಾದ ಹರ್ಷಿತಾ ಭಂಡಾರಿ, ತನುಜಾ ನಾಯ್ಕ, ಲಕ್ಷ್ಮೀ ಹೆಗಡೆ ಸಹಕರಿಸಿದರು.