Slide
Slide
Slide
previous arrow
next arrow

ಫೆ.4ಕ್ಕೆ ಜಿಲ್ಲಾ ಮಟ್ಟದ ಮುಕ್ತ ರ಼್ಯಾಪಿಡ್ ಚೆಸ್ ಪಂದ್ಯಾವಳಿ

300x250 AD

ಯಲ್ಲಾಪುರ: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ತಾಲೂಕು ಸಮಿತಿಯ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಮುಕ್ತ ರ಼್ಯಾಪಿಡ್ ಚೆಸ್ ಪಂದ್ಯಾವಳಿಯನ್ನು ಫೆ.4 ರಂದು ಪಟ್ಟಣದ ಟಿಎಂಎಸ್ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ತಾಲೂಕು ಸಮಿತಿ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ ಹೇಳಿದರು.

ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗುತ್ತಿಗೆದಾರ ದಿ.ವಿನೋದ ಪಾಟೀಲ ಸ್ಮರಣಾರ್ಥ ನಡೆಯುವ ಈ ಪಂದ್ಯಾವಳಿಯಲ್ಲಿ 12 ವರ್ಷದೊಳಗಿನವರು, 16 ವರ್ಷದೊಳಗಿನವರು ಹಾಗೂ 16 ವರ್ಷದ ಮೇಲ್ಪಟ್ಟವರಿಗೆ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ವಿಜೇತ 51 ಜನರಿಗೆ ಟ್ರೋಫಿ ವಿತರಿಸಲಾಗುವುದು. 16 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಟ್ರೋಫಿ ಜತೆ ನಗದು ಬಹುಮಾನ ನೀಡಲಾಗುವುದೆಂದರು.

ಮೊದಲು ಹೆಸರು ನೋಂದಾಯಿಸುವ 150 ಸ್ಪರ್ಧಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ವಯಸ್ಸಿನ ಧೃಢೀಕರಣಕ್ಕೆ ಆಧಾರ್ ಕಾರ್ಡ್ ತರಬೇಕು. ಪೈಡ್ ಲಾ ಹಾಗೂ ಸ್ವಿಸ್ ಲೀಗ್ ನ ಇತ್ತೀಚಿನ ನಿಯಮದನ್ವಯ ಸ್ಪರ್ಧೆಗಳು ನಡೆಯಲಿವೆ. ನೋಂದಣಿ ಮತ್ತು ಹೆಚ್ಚಿನ ಮಾಹಿತಿಗೆ ವೇಣುಗೋಪಾಲ ಮದ್ಗುಣಿ- tel:+919448408602, ಆನಂದ ಸ್ವಾಮಿ- tel:+918762480128 ಅಥವಾ ರಾಮಚಂದ್ರ ಭಟ್ಟ- tel:+919481360128 ಅವರನ್ನು ಸಂಪರ್ಕಿಸುವಂತೆ ಕೋರಿದರು.

300x250 AD

ರಾಜ್ಯಕ್ಕೆ ಕರ್ನಾಟಕ ಎಂಬ ನಾಮಕರಣದ ಸುವರ್ಣ ಮಹೋತ್ಸವದ ಪ್ರಯುಕ್ತ ವರ್ಷವಿಡೀ ವಿವಿಧ ಕಾರ್ಯಕ್ರಮಗಳನ್ನು ತಾಲೂಕಿನಾದ್ಯಂತ ಸಂಘದಿಂದ ಹಮ್ಮಿಕೊಳ್ಳಾಗುವುದೆಂದರು. ಸಂಘದ ಕಾರ್ಯದರ್ಶಿ ಎ.ಎಂ.ಶೇಖ್, ಉಪಾಧ್ಯಕ್ಷ ಸತೀಶ ಹೆಗಡೆ, ಅಂತಾರಾಷ್ಟ್ರೀಯ ಚೆಸ್ ಆಟಗಾರ ರಾಮಚಂದ್ರ ಭಟ್ಟ ಶಿರಸಿ, ಚೆಸ್ ಕೋಚ್ ಆನಂದ ಸ್ವಾಮಿ ಇದ್ದರು.

Share This
300x250 AD
300x250 AD
300x250 AD
Back to top