ಭಟ್ಕಳ: ರಾಮಮಂದಿರದ ವಿಷಯದಲ್ಲಿ ಸಚಿವ ಮಂಕಾಳ ವೈದ್ಯರಿಗೆ ತಿಳುವಳಿಕೆಯ ಕೊರತೆ ಇದೆ ಎಂದು ಭಟ್ಕಳ ಬಿಜೆಪಿ ಮಂಡಲದ ಅಧ್ಯಕ್ಷ ಸುಬ್ರಾಯ ದೇವಾಡಿಗ ಹೇಳಿದರು.
ಅವರು ಮಣ್ಕುಳಿಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯರು ರಾಮಮಂದಿರ ವಿಷಯದಲ್ಲಿ ಬಿಜೆಪಿಯವರು ಬೋಗಸ್ ವ್ಯಕ್ತಿ, ಸದಾ ಸುಳ್ಳು ಹೇಳಿ ಗಲಭೆ ಮಾಡಿಕೊಂಡು ರಾಜಕಾರಣ ಮಾಡುತ್ತಾರೆ ಎಂದು ಆರೋಪ ಮಾಡಿದ್ದಾರೆ. ಆದರೆ ರಾಮಮಂದಿರದ ವಿಷಯದಲ್ಲಿ ಸಚಿವ ಮಂಕಾಳ ವೈದ್ಯರಿಗೆ ತಿಳುವಿಕೆಯ ಕೊರತೆ ಇದೆ. ನಮ್ಮ ಪಕ್ಷ ಸ್ಥಾಪನೆಯಾಗಿನಿಂದಲೂ ನಮ್ಮ ಪಕ್ಷದ ಅಜಂಡದಲ್ಲಿ ಮೂರು ವಿಷಯಗಳು ಒಳಗೊಂಡಿದ್ದು ಅದರಲ್ಲಿ ಮೊದಲನೆದಾಗಿ ರಾಮ ಮಂದಿರದ ನಿರ್ಮಾಣ, ಆರ್ಟಿಕಲ್ 370 ರದ್ದತಿ, ರಾಮ ಮಂದಿರ ನಿರ್ಮಾಣ ಬಿಜೆಪಿ ಪ್ರಾಯೋಜಕತ್ವದ ಕಾರ್ಯಕ್ರಮವಲ್ಲ, ಅದು ರಾಮ ಮಂದಿರ ನ್ಯಾಷನಲ್ ಟ್ರಸ್ಟ್ ಹಾಗೂ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮವಾಗಿದ್ದು, ಇದರಲ್ಲಿ ಬಿಜೆಪಿಯ ಎಲ್ಲಾ ಬಿಜೆಪಿ ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಂಡು ಕೆಲಸ ಮಾಡುತ್ತಿದ್ದಾರೆ. ಹಾಗಾಗಿಯೇ ಕೆಲವರಿಗೆ ಅದು ಬಿಜೆಪಿ ಪ್ರಾಯೋಜಕತ್ವದ ಕಾರ್ಯಕ್ರಮ ಎಂದು ತಿಳಿದು ಕೊಂಡಿದ್ದಾರೆ. ಇದೊಂದು ಪಕ್ಷಾತೀತವಾದ ಕಾರ್ಯಕ್ರಮವಾಗಿದ್ದು, ಕಾಂಗ್ರೆಸ್ ಪಕ್ಷ ನೇತಾರರದ ಸೋನಿಯಾ ಗಾಂಧಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ರಿಗೂ ಕೂಡ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ನರೇಂದ್ರ ಮೋದಿ ದೇಶದ ಪ್ರಾಧಾನಿಯಾಗಿ ಹಾಗೂ ಯೋಗಿ ಆದಿತ್ಯನಾಥ ಆ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.
ಮಂತ್ರಾಕ್ಷತೆ ಕೊಡುವ ವಿಚಾರದಲ್ಲಿ ಕೂಡ ರಾಮ ಭಕ್ತರು ಮೋದಿಜೀ ಹಾಗೂ ಯೋಗಿಜಿ ಬಗ್ಗೆ ಯಾವುದೇ ವಿಚಾರ ಹೇಳದೆ ಜನವರಿ 22 ರಂದು ರಾಮ ಮಂದಿರ ಉದ್ಘಾಟನೆ ಇದೆ. ಆ ದಿನದಂದು ಮಂತ್ರಾಕ್ಷತೆಯನ್ನು ಉಪಯೋಗಿಸಿ ಎಂದು ಹೇಳಿ ಬರುತ್ತಿದ್ದಾರೆ. ಅದೇ ರೀತಿ ಕಟೌಟ್ ವಿಚಾರದಲ್ಲಿಯೂ ಕೂಡ ಯಾವ ಬಿಜೆಪಿ ಕಾರ್ಯಕರ್ತರ ಹೆಸರಿನಲ್ಲಿ ಕಟೌಟ್ ಹಾಕಿಲ್ಲ. ಬದಲಾಗಿ ಆಟೋ ಸ್ಟ್ಯಾಂಡ್ , ವಿವಿಧ ಊರಿನಲ್ಲಿ ಸಂಘ ಸಂಸ್ಥೆಯ ಹೆಸರಿನಲ್ಲಿ ಕಟೌಟ್ ಹಾಕಿದ್ದಾರೆ. ರಾಮ ಮಂದಿರದ ನಿರ್ಮಾಣದಲ್ಲಿ ಮೋದಿ ಹಾಗೂ ಯೋಗಿಯರು ಮಹತ್ವವಾದ ಪಾತ್ರ ವಹಿಸಿರುವುದರಿಂದ ಅವರ ಫೋಟೋ ಹಾಕಲಾಗಿದೆ. ಕಾಂಗ್ರೆಸ್ ಪಕ್ಷದವರೂ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಅಥವಾ ಸಚಿವ ಮಂಕಾಳ್ ವೈದ್ಯರ ಫೋಟೋ ಹಾಕಿ ರಾಮ ಮಂದಿರ ಉದ್ಗಾಟನೆ ಸ್ವಾಗತಕೋರಬಹುದು ಇದಕ್ಕೆ ನಮ್ಮ ಬಿಜೆಪಿ ಪಕ್ಷದಿಂದ ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿದರು
ದೇಣಿಗೆ ವಿಚಾರದಲ್ಲಿಯೂ ಕೂಡ ಸಚಿವ ಮಂಕಾಳ್ ವೈದ್ಯ ಪ್ರಸ್ತಾಪ ಮಾಡಿದ್ದು, ರಾಮ ಮಂದಿರಕ್ಕೆ ಬಿಜೆಪಿ ಕಾಂಗ್ರೆಸ್ ಎನ್ನದೆ ಸಮಸ್ತ ಹಿಂದೂ ಬಾಂಧವರಿಂದ ದೇಣಿಗೆ ಸಂಗ್ರಹ ಮಾಡಿದ್ದೇವೆ. ಅದಕ್ಕೆ ಸಚಿವ ಮಂಕಾಳ್ ವೈದರಿಗೆ ಸೇರಿ ದೇಣಿಗೆ ಕೊಟ್ಟ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇವೆ ಎಂದ ಅವರು ಕಾಂಗ್ರೇಸ್ ಪಕ್ಷದವರು ನಾವು ಹಿಂದೂ, ನಾವು ಹಿಂದೂ ಎಂದು ಹೇಳಿಕೊಳ್ಳುತ್ತಿದ್ದಾರೆ. ಯಾವ ಹಿಂದೂ ಕೂಡಾ ನಾನು ಎಂದು ಹೇಳಿಕೊಳ್ಳುವ ದುರ್ಗತಿಗೆ ಬರಬಾರದು. ಕಾಂಗ್ರೆಸ್ ಅವರು ಎಷ್ಟು ಭಯಪಟ್ಟಿದ್ದಾರೆ ಎಂದರೆ ರಾಮ ಮಂದಿರ ನಿರ್ಮಾಣವಾದರೆ ಮುಂದಿನ ದಿನದಲ್ಲಿ ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತೆವೆ ಎಂದು ಹೀಗೆ ಹೇಳಿಕೆ ಕೊಡುತ್ತಿದ್ದಾರೆ. ಯಾರು ಬೋಗಸ್ ರಾಮ ಭಕ್ತರು ಹಾಗೂ ಯಾರು ನಿಜವಾದ ರಾಮ ಭಕ್ತರು ಎಂದು 2024 ರ ಚುನಾವಣೆಯಲ್ಲಿ ತಿಳಿಯಲಿದೆ ಎಂದರು.
ಬಳಿಕ ಮಾತನಾಡಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎಸ್.ಹೆಗಡೆ ಈ ದೇಶದ ಪ್ರತಿಯೊಬ್ಬ ಹಿಂದೂ ಹಾಗೂ ರಾಮ ಭಕ್ತರು ಕಳೆದ 500 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿರುವುದನ್ನು ನಾವು ನೋಡಿದ್ದೇವೆ. ನಮ್ಮ ಜಿಲ್ಲಾ ಉಸ್ತುವಾರಿ ಸಚಿವರ ಹೇಳಿಕೆ ಗಮನಿಸಿದರೆ ದೇಶದ ಎಲ್ಲಾ ರಾಮ ಭಕ್ತರು ಹಿಂದೂಗಳು ರಾಮ ಮಂದಿರ ಉದ್ಘಾಟನೆಯ ಸಂಭ್ರಮ ಮಾಡಲಿದ್ದಾರೆ. ಈ ಸಂಭ್ರಮ ನೋಡಿ ಹೊಟ್ಟೆ ಕಿಚ್ಚಿನಿಂದ ಈ ಹೇಳಿಕೆ ನೀಡುತ್ತಿದ್ದಾರೋ ಅಥವಾ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿರುವ ಹಾಗೆ ಕಾಣುತ್ತಿದೆ ಎಂದರು
ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಗೋವಿಂದ ನಾಯ್ಕ, ಸುರೇಶ ನಾಯ್ಕ ಕೋಣೆಮನೆ , ಶ್ರೀನಿವಾಸ ನಾಯ್ಕ, ಭಾಸ್ಕರ್ ದಹೀಮನೆ, ಈಶ್ವರ ನಾಯ್ಕ ಉಪಸ್ಥಿತರಿದ್ದರು