ಹೊನ್ನಾವರ : ತಾಲೂಕಿನ ಅನಂತವಾಡಿ -ಮೂಳಗೋಡಿನಲ್ಲಿ ಅಕಾಲದಲ್ಲಿ ಅಣಬೆ ಎದ್ದು ಬಂದಿದೆ. ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿ ಮಾತ್ರ ಕಂಡು ಬರುವ ಅಣಬೆ ಮತ್ತೆ ಕಾಣದು. ನಾಗರ ಪಂಚಮಿಯ ಆಚೆ ಈಚೆಯ ಕಾಲ ಅಣಬೆಯ ಪರ್ವಕಾಲ. ಗಣೇಶ್ ಚತುರ್ಥಿಯ ಸಮಯದ ನಂತರ ಕುಂಠಿತವಾಗುತ್ತದೆ.
ಮಾರುಕಟ್ಟೆಯಲ್ಲಿ ಬಾರಿ ಬೇಡಿಕೆ ಇರುವ ದೇಶ ಹೊರದೇಶಕ್ಕೂ ಹೋಗುವ ಕಾಡು ಅಣಬೆ ಹುತ್ತಿನ ಅಥವಾ ವರಲೆಯ ಮಣ್ಣಿರುವ ಜಾಗದಲ್ಲಿ ಮಾತ್ರ ಎದ್ದು ಬರುತ್ತದೆ. ವರಲೆ ಮಣ್ಣೋಳಗಿನ ಗೂಡಿನ ಮೂಲವೇ ಇದರ ಹುಟ್ಟಿಗೆ ನೆಲೆ ಎನ್ನುವುದು ಎಲ್ಲರೂ ತಿಳಿದಿರುವ ಸಂಗತಿ. ಆದರೆ ಇದರ ಹುಟ್ಟಿಗೂ ಒಂದು ಸಮಯವಿದೆ. ಈ ಸಮಯ ಮೀರಿ ಹುಟ್ಟುತ್ತ ಇರುವುದು ಪ್ರಕೃತಿಯ ಒಳಗಿನ ವಿಚಿತ್ರ ಬದಲಾವಣೆ ಎನ್ನಬಹುದು. ಕೆಲವೊಮ್ಮೆ ಪ್ರಕೃತಿಯ ವಿಚಿತ್ರ ಬದಲಾವಣೆ ಮಾನವ ಜನಾಂಗಕ್ಕೆ ಪ್ರತಿಕೂಲವಾದ ವಾತಾವರಣ ಸೃಷ್ಟಿ ಮಾಡುತ್ತದೆ.